ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ

ತುಬಚಿ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನತೆ ಭಯಭೀತರಾಗಿದ್ದಾರೆ.

ಮುತ್ತೂರ, ಶೂರ್ಪಾಲಿ, ತುಬಚಿ, ಕಂಕಣವಾಡಿ ಗ್ರಾಮಗಳು ನಡುಗಡ್ಡೆಯಂತಾಗಿ ಪ್ರವಾಹದ ಭೀತಿ

ಎದುರಾಗಿದೆ.

ಮುತ್ತೂರ ನಡುಗಡ್ಡೆಯಲ್ಲಿ 38ಕ್ಕಿಂತ ಹೆಚ್ಚು ಹಾಗೂ ಶೂರ್ಪಾಲಿಯ ಜಾಲಿಗಡ್ಡೆ 15ಕ್ಕಿಂತ ಹೆಚ್ಚು ಕುಟುಂಬಗಳು ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ.

ನದಿ ಪಾತ್ರದಲ್ಲಿ ವಾಸಿಸುತ್ತಿರುವ ಅನೇಕ ರೈತ ಕುಟುಂಬಗಳು ಪ್ರವಾಹ ಭೀತಿಯಿಂದ ಜಾನುವಾರು ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.