Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ತಿರುಪತಿ ದೇಗುಲದಿಂದ ಬರೋಬ್ಬರಿ 4 ಸಾವಿರ ಕೋಟಿ ರೂ. ಠೇವಣಿ

Tuesday, 03.04.2018, 10:03 AM       No Comments

ತಿರುಪತಿ: ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇಗುಲ ಈಗಾಗಲೇ ಅಂತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ. ದೇಗುಲದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ ಇದೀಗ ಬರೋಬ್ಬರಿ ನಾಲ್ಕು ಸಾವಿರ ಕೋಟಿ ರೂ. ಗಳನ್ನು ಠೇವಣಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ಕೆ. ಸಿಂಘಾಲ್‌, ಹಣ ಠೇವಣಿ ಸಂಬಂಧ ನಡೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಹಲವಾರು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳು ಭಾಗವಹಿಸಿದ್ದವು. ಇದರಲ್ಲಿ ಆಂಧ್ರ ಬ್ಯಾಂಕ್‌ನಲ್ಲಿ 3,000 ಕೋಟಿ ರೂಪಾಯಿಗಳನ್ನು ಶೇ.7.32ರಷ್ಟು ಬಡ್ಡಿಗೆ ಮತ್ತು ಒಂದು ಸಾವಿರ ಕೋಟಿ ರೂ.ಗಳನ್ನು ಇಂಡಸ್​ಲ್ಯಾಂಡ್‌ ಬ್ಯಾಂಕ್‌ನಲ್ಲಿ ಶೇ.7.66ರಷ್ಟು ಬಡ್ಡಿಗೆ ಠೇವಣಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಆಂಧ್ರ ಬ್ಯಾಂಕ್​ನಿಂದ ವಾರ್ಷಿಕ 260 ಕೋಟಿ ರೂ. ಬಡ್ಡಿ ಬರಲಿದ್ದರೆ, ಇಂಡಸ್‌ಬ್ಯಾಂಕ್‌ನಿಂದ ವಾರ್ಷಿಕ 77 ಕೋಟಿ ರೂ. ಬಡ್ಡಿ ಬರಲಿದೆ.
ಈ ಎರಡು ಬ್ಯಾಂಕ್‌‌ಗಳಲ್ಲಿ ಠೇವಣಿ ಮಾಡಿರುವುದು ಅಕ್ರಮ ಎನ್ನುವ ಆರೋಪ ಕೇಳಿಬಂದಿರುವುದನ್ನು ಸಿಂಘಾಲ್‌ ನಿರಾಕರಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top