ಕುಡಿದ ಮತ್ತಿನಲ್ಲಿ ಮಾಜಿ ಬಿಗ್​ಬಾಸ್​ ಸ್ಪರ್ಧಿ ಸುನಾಮಿ ಕಿಟ್ಟಿಯಿಂದ ದಾಂಧಲೆ!

ಬೆಂಗಳೂರು: ಮಾಜಿ ಬಿಗ್​ಬಾಸ್​ ಸ್ಪರ್ಧಿ ಹಾಗೂ ರಿಯಾಲಿಟಿ ಶೋಗಳಾದ ‘ಇಂಡಿಯನ್​’ ಮತ್ತು ‘ತಕಧಿಮಿತ ಡ್ಯಾನ್ಸಿಂಗ್​ ಸ್ಟಾರ್​’ ವಿಜೇತ ಸುನಾಮಿ ಕಿಟ್ಟಿ ಅವರು ಕುಡಿದ ಮತ್ತಿನಲ್ಲಿ ರೆಸ್ಟೋರೆಂಟ್​ನಲ್ಲಿ ಆಟಾಟೋಪ ಮೆರೆದ ಘಟನೆ ಭಾನುವಾರ ರಾತ್ರಿ ನಡೆದಿದೆ.

ನಗರದ ಒರಾಯನ್ ಮಾಲ್​ನಲ್ಲಿರುವ ರೆಸ್ಟೋರೆಂಟ್​​ಗೆ ಭಾನುವಾರ ರಾತ್ರಿ ತನ್ನ ಸ್ನೇಹಿತರ ಜತೆ ಮದ್ಯ ಸೇವನೆಗೆ ಕಿಟ್ಟಿ ಬಂದಿದ್ದ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಬಳಿ ಒಂದು​ ಸಿಗರೇಟ್ ನೀಡುವಂತೆ ಕೇಳಿದ್ದ. ಆದರೆ, ಒಂದು ಸಿಗರೇಟ್ ಸಿಗಲ್ಲ. ಫುಲ್ ಪ್ಯಾಕ್ ತೆಗೆದುಕೊಳ್ಳಿ ಎಂದು ಸಿಬ್ಬಂದಿ ಹೇಳಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಕಿಟ್ಟಿ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಗಲಾಟೆ ನಡೆದಾಗ, ಕುಡಿದ ಮತ್ತಿನಲ್ಲಿದ್ದ ಕಿಟ್ಟಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ಸ್ಥಳಕ್ಕೆ ಸುಬ್ರಮಣ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕಿಡ್ನಾಪ್ ಪ್ರಕರಣದಲ್ಲಿ ಜ್ಞಾನಭಾರತಿ ಠಾಣಾ ಪೊಲೀಸರು ಕಿಟ್ಟಿಯನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದ. (ದಿಗ್ವಿಜಯ ನ್ಯೂಸ್​)