ಸೇನಾ ಸಿಬ್ಬಂದಿಗೆ ಕಲ್ಲು ಎಸೆಯುವ ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಿ: ಟ್ರಂಪ್​

ವಾಷಿಂಗ್ಟನ್​: ಭದ್ರತಾ ಪಡೆ ಸಿಬ್ಬಂದಿಗೆ ಕಲ್ಲು ಎಸೆದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸೇನಾ ಸಿಬ್ಬಂದಿಗೆ ಸೂಚಿಸಿದ್ದಾರೆ.

ಸೆಂಟ್ರಲ್​ ಅಮೆರಿಕಾಕ್ಕೆ ಅಕ್ರಮವಾಗಿ ಪ್ರವೇಶಿಸುವ ವಲಸಿಗರನ್ನು ಗುರಿಯಾಗಿಸಿ ಟ್ರಂಪ್​ ಈ ರೀತಿ ಹೇಳಿದ್ದು, ಮೆಕ್ಸಿಕನ್​ ಗಡಿಯಲ್ಲಿ ನಿಯೋಜಿಸಿರುವ ಯೋಧರಿಗೆ ಈ ರೀತಿ ತಿಳಿಸಿದ್ದಾರೆ.

ಈ ಕುರಿತು ವೈಟ್​ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್​, ಮೆಕ್ಸಿಕೊ ಮೂಲಕ ಅಮೆರಿಕ ಗಡಿಯೊಳಗೆ ನುಸುಳುತ್ತಿರುವ ಹಲವು ಸಾವಿರ ವಲಸಿಗರು ಮೆಕ್ಸಿಕನ್​ ಪೊಲೀಸರತ್ತ ಕಲ್ಲುಗಳನ್ನು ಎಸೆದು ಹಿಂಸೆ ನೀಡುತ್ತಿದ್ದಾರೆ” ಎಂದಿದ್ದರು.

ಇದನ್ನು ನಾವು ಸಹಿಸುವುದಿಲ್ಲ. ಅವರು ನಮ್ಮ ಸೇನೆಗೆ ಬಂಡೆಗಳನ್ನು ಎಸೆದರೆ, ನಮ್ಮ ಸೇನೆಯೂ ಹೋರಾಡುತ್ತದೆ. ವಲಸಿಗರು ನಿಮಗೆ ಕಲ್ಲುಗಳನ್ನು ಎಸೆದರೆ ಅದನ್ನು ರೈಫೆಲ್​ ಎಂದು ಪರಿಗಣಿಸಿ ಎಂದು ಭದ್ರತಾ ಪಡೆಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಕ್ರಮ ವಲಸಿಗರನ್ನು ತಡೆಯಲೆಂದೇ ಮೆಕ್ಸಿಕೊ ಗಡಿ ಪ್ರದೇಶದಲ್ಲಿ ಅಮೆರಿಕ 5,000 ಭದ್ರತಾ ಪಡೆ ಸಿಬ್ಬಂದಿ ನಿಯೋಜಿಸಿದೆ. (ಏಜೆನ್ಸೀಸ್)