ಗ್ರೀನ್ ಕಾರ್ಡ್ ನಿಯಮ ಇನ್ನಷ್ಟು ಬಿಗಿ

ವಾಷಿಂಗ್ಟನ್: ಅಮೆರಿಕದ ಪೌರತ್ವ ಬಯಸುವ ವಲಸಿಗರಿಗೆ ನೀಡುವ ಗ್ರೀನ್ ಕಾರ್ಡ್ ನಿಯಮವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇನ್ನಷ್ಟು ಬಿಗಿಗೊಳಿಸಿದೆ. ಇದರಿಂದ ಬಡವರ್ಗದ ವಲಸಿಗರು ಗ್ರೀನ್ ಕಾರ್ಡ್ ಪಡೆಯುವುದು ಕಷ್ಟಸಾಧ್ಯವಾಗಲಿದೆ ಎನ್ನಲಾಗಿದೆ. ನಾಗರಿಕ ಸೇವೆಗಳಾದ ಆಹಾರ, ವಸತಿ ನೆರವು, ಆರೋಗ್ಯ ಸೇವೆ ಪಡೆದುಕೊಳ್ಳುತ್ತಿರುವವರು ಅಮೆರಿಕ ಗ್ರೀನ್ ಕಾರ್ಡ್ ಪಡೆದುಕೊಳ್ಳಲು ಅನರ್ಹರಾಗಿರುತ್ತಾರೆ.

ಆಂತರಿಕ ಭದ್ರತಾ ಇಲಾಖೆ ನೂತನ ನಿಯಮ ರೂಪಿಸಿದ್ದು, ಇದು ವಲಸಿಗರಿಗೆ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಅಮೆರಿಕದ ವಲಸೆ ಮತ್ತು ಪೌರತ್ವ ಸೇವಾ ವಿಭಾಗದ ಅಧ್ಯಕ್ಷ ಕೆನ್ ಪ್ರತಿಕ್ರಿಯಿಸಿದ್ದು, ಅಮೆರಿಕದ ಮೇಲೆ ಯಾವುದೇ ರೀತಿ ಹೊರೆ ಹೊರಿಸದವರಿಗೆ, ಆದಾಯ ತಂದುಕೊಡುವವರಿಗೆ ಮಾತ್ರವೇ ಗ್ರೀನ್ ಕಾರ್ಡ್ ನೀಡಲು ಸಾಧ್ಯ ಎಂದಿದ್ದಾರೆ.

ಸಾಮಾನ್ಯವಾಗಿ ಅಲ್ಪಪ್ರಮಾಣದ ವಲಸಿಗರು ಮಾತ್ರ ಸಾರ್ವಜನಿಕ ಸೇವೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈಗ ಗ್ರೀನ್ ಕಾರ್ಡ್ ಪಡೆಯಬೇಕೆಂಬ ಹಂಬಲಕ್ಕೆ ಇವರು ಕಟ್ಟುಬಿದ್ದರೆ, ಸಾರ್ವಜನಿಕ ಸೇವೆಯ ಲಾಭವನ್ನು ಬಿಡಬೇಕಾಗುತ್ತದೆ.

Leave a Reply

Your email address will not be published. Required fields are marked *