More

    ಉಡಾನ್​ ಯೋಜನೆಯಿಂದ ಬೆಳಗಾವಿಯಿಂದ ತಿರುಪತಿ, ಮೈಸೂರು, ಹೈದರಾಬಾದ್​ಗೆ ಪ್ರತಿದಿನ ಮೂರು ವಿಮಾನಗಳ ಹಾರಾಟ

    ಬೆಂಗಳೂರು: ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್​ಗೆ ಪ್ರತಿದಿನ ವಿಮಾನಗಳು ಹಾರಾಟ ನಡೆಸಲಿವೆ.

    ಬೆಂಗಳೂರು ಮೂಲದ ಟ್ರೂ ಜೆಟ್​ ಸಂಸ್ಥೆಯು ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಇದು ಕೇಂದರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್​ ಯೋಜನೆಯಿಂದ ಸಾಧ್ಯವಾಗಿದೆ.

    ಸಂಸ್ಥೆಯು ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್​ಗೆ ಪ್ರತಿದಿನ ಆರು ವಿಮಾನಗಳ ಮೂಲಕ ಹಾರಾಟ ನಡೆಸಲಿದೆ. 72 ಆಸಗಳ ಸಾಮಥ್ಯವುಳ್ಳ ವಿಮಾನಗಳು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

    ಟ್ರೂ ಜೆಟ್​ ಸಂಸ್ಥೆಯು ಉಡಾನ್​ ಯೋಜನೆಯಡಿ ಈಗಾಗಲೇ 32 ವಿಮಾನಗಳನ್ನು ಕಾರ್ಯನಿರತಗೊಳಿಸಿದೆ. ಈಗ ಈ ಮೂರು ವಿಮಾನಗಳ ಹಾರಾಟಕ್ಕೆ ಚಾಲನೆ ನೀಡುವ ಮೂಲಕ ಒಟ್ಟು 38 ವಿಮಾನಗಳು ಹಾರಾಟ ನಡೆಸುತ್ತಿವೆ.

    ಉಡಾನ್​ ಯೋಜನೆಯ ಮೂರನೇ ಹಂತದಲ್ಲಿ ಈ ವಿಮಾನ ಯಾನ ಸೇವೆಯನ್ನು ಆರಂಭಿಸಲಾಗಿದೆ. 2017ರಲ್ಲಿ ಉಡಾನ್​ ಯೋಜನೆ ಜಾರಿಯಾಗಿತ್ತು. ಟ್ರೂ ಜೆಟ್​ ಸಂಸ್ಥೆಯು ಏಪ್ರಿಲ್​ 2015ರಿಂದ ವಿಮಾನ ಯಾನ ಸೇವೆ ಆರಂಭಿಸಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts