ಹಿಮಾಚಲಪ್ರದೇಶಕ್ಕೆ ಟ್ರೆಕ್ಕಿಂಗ್​ಗೆ ಹೋದ ಬೆಂಗಳೂರು ಟೆಕ್ಕಿ ನಾಪತ್ತೆ !

ಬೆಂಗಳೂರು: ನಗರದ ಟೆಕ್ಕಿ ಹಿಮಾಚಲ ಪ್ರದೇಶದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ಟ್ರೆಕ್ಕಿಂಗ್​ಗೆ  ಹೋಗಿದ್ದ ಟೆಕ್ಕಿ ಸತ್ಯನಾರಾಯಣ ವೆಂಕಟಾಚಾರಿ ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ಎಂಎನ್​ಸಿ ಕಂಪನಿಯಲ್ಲಿ ಸಾಫ್ಟವೇರ್​ ಇಂಜಿನಿಯರ್​ ಆಗಿರುವ ಸತ್ಯನಾರಾಯಣ ವೆಂಕಟಾಚಾರಿ ಜು.24ರಂದುಹಿಮಾಚಲ ಪ್ರದೇಶದ ಹೋಗಿ ಕಿನ್ನೌರ್​ ಜಿಲ್ಲೆಯ ರೋಪಾಕ್ಕೆ ಟ್ರೆಕ್ಕಿಂಗ್​ಗೆ ಹೋಗಿದ್ದರು. 25ರಂದು ಮನೆಗೆ ಫೋನ್ ಮಾಡಿ ಮಾತನಾಡಿದ್ದರು. ಅದಾದ ನಂತರ ಅವರನ್ನು ಸಂಪರ್ಕಿಸಲು ಸಾಧ್ಯವೇ ಆಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಮಾಹಿತಿ ಸಿಗದಾಗ ಕಿನ್ನೌರ್​ ಎಸ್ ಪಿ ಸಾಕ್ಷಿ ವರ್ಮಾ ಅವರನ್ನು ಭೇಟಿಯಾಗಿ ಭಾವನಗರ್​ ಠಾಣೆಯಲ್ಲಿ ದೂರು ನೀಡಿದ್ದರು.

ಕಾರ್ಯಪ್ರವೃತ್ತರಾಗಿರುವ ಇಂಡೋ ಟಿಬೇಟಿಯನ್​ ಗಡಿ ಪೊಲೀಸರು, ಹಿಮಾಚಲ ಪೊಲೀಸರು ಹಾಗೂ ಸ್ಥಳೀಯವಾಗಿ ಟ್ರೆಕ್ಕಿಂಗ್​ ಮಾಡುವವರು ಸೇರಿ ಸತ್ಯನಾರಾಯಣ ವೆಂಕಟಾಚಾರಿ ಅವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.