ಚಾರಣಿಗನಿಗೆ ದಾರಿ ತೋರಿದ ಕುಕ್ಕೆ ತೀರ್ಥ ಪೈಪ್!

Latest News

ವೀಳ್ಯದೆಲೆ ತೋಟಕ್ಕೆ ರೋಗಬಾಧೆ

ಲಕ್ಷ್ಮೇಶ್ವರ: ಸತತವಾಗಿ ಸುರಿದ ಮಳೆಗೆ ತೋಟಗಾರಿಕೆ ಬೆಳೆ ವೀಳ್ಯದೆಲೆಗೂ ಕುತ್ತು ಬಂದಿದ್ದು ಬೆಳೆಗಾರರು ಹೌಹಾರಿದ್ದಾರೆ. ತಾಲೂಕಿನಾದ್ಯಂತ ಲಕ್ಷ್ಮೇಶ್ವರ,...

ನರೇಗಲ್ಲ ವನಿತೆಯರು ಚಾಂಪಿಯನ್

ನರೇಗಲ್ಲ: ಸಮೀಪದ ಅಬ್ಬಿಗೇರಿಯ ಶ್ರೀಅನ್ನದಾನ ವಿಜಯ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಅಟ್ಯಾ-ಪಟ್ಯಾ ಪಂದ್ಯಾವಳಿಯಲ್ಲಿ ಮಹಿಳೆಯರ ಸೀನಿಯರ್ ವಿಭಾಗದಲ್ಲಿ ನರೇಗಲ್ಲ ತಂಡವು...

ಸಹಕಾರಿ ಬ್ಯಾಂಕ್‌ಗಳು ವಿಶ್ವಾಸದ ಪ್ರತೀಕ

ಬೀಳಗಿ: ಸಹಕಾರಿ ಪತ್ತಿನ ಸಂಘಗಳು, ಸೌಹಾರ್ದ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು ಗ್ರಾಮದ ಹೆಬ್ಬಾಗಿಲು ಇದ್ದಂತೆ ಎಂದು ವಿಧಾನ ಪರಿಷತ್...

1 ಕೋಟಿ ರೂ. ಅನುದಾನ ಬಿಡುಗಡೆ

ಜಮಖಂಡಿ: ಕಟ್ಟೆ ಕೆರೆ ಆವರಣದಲ್ಲಿ ಒಳಾಂಗಣ ಜಿಮ್, ಪ್ರಾಣಿ ಸಂಗ್ರಹಾಲಯ, ಚಿಕ್ಕ ಮಕ್ಕಳಿಗಾಗಿ ರೈಲು, ಮನರಂಜನೆಗಾಗಿ ಭೂತ ಬಂಗ್ಲಾ ನಿರ್ಮಾಣ, 2 ಎಕರೆ...

ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಪ್ರತಿಭಟನೆ

ಬಾಗಲಕೋಟೆ: ರಾಜ್ಯದಲ್ಲಿ 1995ರ ನಂತರ ಆರಂಭವಾದ ಶಾಲೆ-ಕಾಲೇಜುಗಳಿಗೆ ಅನುದಾನ ವಿಸ್ತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಖಾಸಗಿ ಶಿಕ್ಷೃಣ ಸಂಸ್ಥೆಗಳ ಆಡಳಿತ ಮತ್ತು ನೌಕರರ...

ಸುಬ್ರಹ್ಮಣ್ಯ: ಕುಮಾರಪರ್ವತಕ್ಕೆ ಚಾರಣ ವೇಳೆ ಭಾನುವಾರ ನಾಪತ್ತೆಯಾಗಿದ್ದ ಬೆಂಗಳೂರಿನ ಸಂತೋಷ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೀರ್ಥ ನೀರು ಪೂರೈಕೆಗಾಗಿ ಅಳವಡಿಸಲಾಗಿದ್ದ ಪೈಪ್‌ನ ಪಥದಲ್ಲಿ ಸಾಗಿ ಮಂಗಳವಾರ ನಾಡು ಸೇರಿದ್ದಾರೆ.

ಬೆಂಗಳೂರಿನ 12 ಜನರ ತಂಡದಲ್ಲಿದ್ದ ಸಂತೋಷ್ ಕುಮಾರ ಪರ್ವತ ತಪ್ಪಲಿನ ಗಿರಿಗದ್ದೆಯಿಂದ ಮುಂದೆ ಬರುವ ಸಂದರ್ಭ ನಾಪತ್ತೆಯಾಗಿದ್ದರು. ದಾರಿ ತಪ್ಪಿದ್ದ ಸಂತೋಷ್ ಮಂಗಳವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಆದಿ ಸುಬ್ರಹ್ಮಣ್ಯ ಬಳಿಯ ಕಲ್ಲಗುಡ್ಡೆ ಎಂಬಲ್ಲಿ ಗ್ರಾ.ಪಂ. ಸದಸ್ಯೆ ಸೌಮ್ಯಾ ಭರತ್ ಮನೆಗೆ ತಲುಪಿದ್ದಾರೆ. ಸೌಮ್ಯಾ ಮನೆಯವರು ಅವರನ್ನು ಗುರುತಿಸಿ ಫಲಾಹಾರ ನೀಡಿದ್ದಾರೆ.

ವಿಷಯ ತಿಳಿದ ಸುಬ್ರಹ್ಮಣ್ಯ ಪೊಲೀಸರು ಕಲ್ಲಗುಡ್ಡೆಗೆ ಬಂದು ಠಾಣೆಗೆ ಕರೆದೊಯ್ದು, ಬಳಿಕ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದರು. ವೈದ್ಯರು ಸಂತೋಷ್ ಆರೋಗ್ಯವಾಗಿರುವುದನ್ನು ದೃಢಪಡಿಸಿದರು. ಬಳಿಕ ಅವರನ್ನು ಸ್ನೇಹಿತರೊಂದಿಗೆ ಕಳುಹಿಸಲಾಯಿತು.
ಕಾಶಿಕಟ್ಟೆ ಗಣಪನ ಮೊರೆ: ಸಂತೋಷ್ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಸ್ನೇಹಿತರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದರು. ಬಳಿಕ ಠಾಣೆ ಮುಂಭಾಗದ ಕಾಶಿಕಟ್ಟೆ ಗಣಪತಿ ದೇವರ ಮೊರೆ ಹೋದರು. ಸೋಮವಾರ ದೇವರಲ್ಲಿ ಪ್ರಾರ್ಥನೆ ನಡೆಸಿದ್ದರು. ತಮ್ಮ ಪ್ರಾರ್ಥನೆಯಂತೆ ಸ್ನೇಹಿತರು ಸಂತೋಷ್ ಜತೆಗೂಡಿ ದೇವಸ್ಥಾನದಲ್ಲಿ ಮಂಗಳವಾರ ಸಾಯಂಕಾಲ ವಿಶೇಷ ಪೂಜೆ ಸಲ್ಲಿಸಿದರು.

ಐದು ತಂಡ ಹುಡುಕಾಟ: ಸಂತೋಷ್‌ರನ್ನು ಹುಡುಕಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯು ಸ್ಥಳೀಯರ ಸಹಾಯದೊಂದಿಗೆ ಐದು ತಂಡಗಳಾಗಿ ಮಂಗಳವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇವರಿಗೆ ಸ್ಥಳೀಯರು ಮತ್ತು ಸ್ಥಳೀಯ ಸಂಘಟನೆಗಳು ಸಹಕಾರ ನೀಡಿದ್ದವು. ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕುಮಾರ್, ಸುಳ್ಯ ಎಸ್‌ಐ ಹರೀಶ್, ಬೆಳ್ಳಾರೆ ಎಸ್‌ಐ ಈರಯ್ಯ, ಸುಬ್ರಹ್ಮಣ್ಯದ ಎಎಸ್‌ಐ ಚಂದಪ್ಪ, ಪುಷ್ಪಗಿರಿ ವನ್ಯಧಾಮದ ಎಸಿಎಫ್ ದಯಾನಂದ್, ಆರ್‌ಎಫ್‌ಒ ಶ್ರೀನಿವಾಸ ನಾಯಕ್, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್, ಡಿಆರ್‌ಎಫ್‌ಓ ಶಶಿ, ವನ್ಯಜೀವಿ ತಜ್ಞ ಭುವನೇಶ್ ಕೈಕಂಬ, ಸೋಮವಾರಪೇಟೆಯ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ತಂಡ ಸೇರಿ 40ಕ್ಕೂ ಅಧಿಕ ಮಂದಿಯಿಂದ ಶೋಧ ಕಾರ್ಯ ನಡೆಯಿತು.

ನೆರವಾದ ಹೊಳೆ ಪಥ; ಟ್ರಕ್ಕಿಂಗ್ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸಲು ಹಿಂದೆ ಉಳಿದ ಸಂತೋಷ್ ದಾರಿ ತಪ್ಪಿದ್ದರು. ಹೀಗಾಗಿ ಎರಡು ದಿನದ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಿದರು. ಪ್ರಾಣಿಗಳಿಂದ ತೊಂದರೆಯಾಗದಿದ್ದರೆ ಟ್ರಕ್ಕಿಂಗ್ ಕೌಶಲವನ್ನು ಅರಿತಿರುವ ಎಲ್ಲರೂ ಸುರಕ್ಷಿತವಾಗಿ ಊರು ಸೇರಲು ಸಾಧ್ಯವಿದೆ. ಇದೇ ರೀತಿ ಸಂತೋಷ್ ಸುರಕ್ಷಿತವಾಗಿ ಮರಳಿದ್ದಾರೆ. ಕಾಡಿನೊಳಗೆ ದಾರಿ ತಪ್ಪಿದರೆ ಮೊದಲು ನೀರಿನ ಮೂಲ ನೋಡಿ, ಬಳಿಕ ಹೊಳೆ ಹರಿದ ಪಥದಲ್ಲಿ ಸಾಗಿದರೆ ಊರು ಸೇರುವುದು ನಿಶ್ಚಿತ ಎಂಬುದನ್ನರಿತಿದ್ದ ಸಂತೋಷ್ ದಾರಿ ತಪ್ಪಿದ ಬಳಿಕ ನೀರನ್ನು ಹುಡುಕಿದರು. ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ನೀರಿನ ಪೈಪ್ ಅವರಿಗೆ ಊರು ಸೇರಲು ಆಸರೆಯಾಯಿತು. ಮೂರು ವರ್ಷದ ಹಿಂದೆ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾದಾಗ ಕುಕ್ಕೆ ದೇವಳಕ್ಕೆ ತೀರ್ಥಕ್ಕಾಗಿ ಆದಿ ಸುಬ್ರಹ್ಮಣ್ಯದ ಕಲ್ಲಗುಡ್ಡೆಯ ಮೇಲಿನ ಅರಣ್ಯ ಪ್ರದೇಶದ ಪೊಸರ ಎಂಬಲ್ಲಿಂದ ಪೈಪ್‌ಲೈನ್ ಮಾಡಲಾಗಿತ್ತು. ಸುಮಾರು ಮೂರರಿಂದ ನಾಲ್ಕು ಕಿ.ಮೀ. ದೂರದಿಂದ ಪೈಪ್ ಮೂಲಕ ದೇವಳಕ್ಕೆ ತೀರ್ಥ ಜಲವನ್ನು ತರಲಾಗಿತ್ತು. ಇದೇ ಪೈಪ್‌ಲೈನ್‌ನ್ನು ದಾರಿಯಾಗಿ ಬಳಸಿ ಸಂತೋಷ್ ಊರು ಸೇರಿದರು. ಪ್ರಸಕ್ತ ಈ ಪೈಪ್‌ಲೈನ್ ನೀರನ್ನು ಬಳಸಲಾಗುತ್ತಿಲ್ಲ.

ಎರಡು ರಾತ್ರಿಗೆ ಬಂಡೆಗಳೇ ಹಾಸಿಗೆ: ಗಿರಿಗದ್ದೆಯಿಂದ ಇಳಿಯುವ ಆರಂಭದಲ್ಲಿ ಕುಕ್ಕೆಗೆ ಬರುವ ದಾರಿಯ ಬದಲಾಗಿ ಇನ್ನೊಂದು ದಾರಿಯಲ್ಲಿ ತೆರಳಿದ ಕಾರಣ ಸಮಸ್ಯೆ ಉಂಟಾಗಿತ್ತು. ಬಳಿಕ ಎರಡು ದಿನ ತಪ್ಪಿ ಬಂದ ದಾರಿಯಲ್ಲಿ ಮುನ್ನಡೆದೆ. ಎರಡು ರಾತ್ರಿಯನ್ನು ಬಂಡೆಗಳ ಮೇಲೆ ಕಳೆದೆ. ಯಾವುದೇ ಪ್ರಾಣಿಗಳು ಎದುರು ಬಂದಿಲ್ಲ, ಎರಡು ಮೂರು ಹಾವುಗಳು ಕಂಡವು. ಎರಡು ದಿನವೂ ಝರಿಯ ನೀರನ್ನು ಕುಡಿದೆ. ಗಿರಿಗದ್ದೆ ಭಟ್ಟರ ಮನೆಯಿಂದ ಬರುವಾಗ ಎರಡು ಹಾದಿ ಸಿಗುತ್ತದೆ. ಅದರಲ್ಲಿ ಒಂದು ಬಲಕ್ಕೆ ಮತ್ತೊಂದು ಮುಂಭಾಗಕ್ಕೆ ಇದೆ. ಬಲ ಭಾಗದ ಹಾದಿ ಚೆನ್ನಾಗಿದ್ದ ಕಾರಣ ಬಲಭಾಗದ ಹಾದಿ ಸರಿ ಎಂದು ಆ ಹಾದಿಯಲ್ಲಿ ಬಂದೆ. ಆದರೆ ಮುಂಭಾಗಕ್ಕೆ ಹೋದ ಹಾದಿ ಸರಿಯಾಗಿತ್ತು, ನಾನು ಬಂದ ದಾರಿ ತಪ್ಪಾಗಿದೆ ಎಂದು ತಿಳಿಯಿತು. ಬಳಿಕ ಧೃತಿಗೆಡದೆ ಮುಂದೆ ಚಲಿಸಿದಾಗ ಝರಿಯೊಂದು ಸಿಕ್ಕಿತು. ಬಳಿಕ ಪೈಪ್ ಅಳವಡಿಸಿದ ಸ್ಥಳ ದೊರಕಿತು. ಅಲ್ಲಿಂದ ಪೈಪ್ ಅನ್ನು ದಾರಿ ಸೂಚಕವಾಗಿ ಬಳಸಿಕೊಂಡು ಬಂದೆ ಎಂದು ಸಂತೋಷ್ ತಿಳಿಸಿದರು.

ನನಗಾಗಿ ಎಷ್ಟೋ ಜನರು, ಪೊಲೀಸ್, ಅರಣ್ಯ ಇಲಾಖೆ ಮತ್ತು ಸ್ಥಳಿಯ ಜನರು ಸೇರಿ ಹುಡುಕಿದ್ದಾರೆ. ಪ್ರತಿಯೊಬ್ಬರು ನನಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗುಡ್ಡ, ಬೆಟ್ಟ, ಅರಣ್ಯ ಭಾಗದಲ್ಲಿ ಹುಡುಕಾಡಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ. ಅದೇ ರೀತಿ ನನ್ನ ಸ್ನೇಹಿತರೂ ಗಾಬರಿಯಿಂದ ಹುಡುಕಾಡಿದ್ದರು. ನನಗೆ ಕಾಡಿನಲ್ಲಿ ಯಾವುದೇ ಭಯವಾಗಿಲ್ಲ. ಆದರೆ ಅಪ್ಪ, ಅಮ್ಮ, ಸ್ನೇಹಿತರು ನಾನು ಬರದಿರುವುದನ್ನು ಕಂಡು ಗಾಬರಿ ಆಗಿರಬಹುದೆಂಬ ಚಿಂತೆ ಮನಸಿನಲ್ಲಿತ್ತು.
ಸಂತೋಷ್, ಚಾರಣಿಕ

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....