ಸಿಂಧನೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರುಗೆ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ನಗರದ ವಿವಿಧ ವಾರ್ಡ್‌ಗಳಿಗೆ 10 ದಿನಕ್ಕೊಮ್ಮೆ ನೀರು ಪೂರೈಸುವುದಾಗಿ ಭರವಸೆ ನೀಡಿದ್ದೀರಿ. ಆದರೆ, 11 ದಿನವಾದರೂ ನೀರು ಪೂರೈಕೆಯಾಗಿಲ್ಲ ಎಂದು ಬಡಿಬೇಸ್, ಖದರಿಯಾ ಕಾಲನಿ, ಗಂಗಾನಗರದ ನಿವಾಸಿಗಳು ಹೇಳುತ್ತಿದ್ದಾರೆ. ಮಾರ್ಚ್‌ನಲ್ಲಿ ತುರ್ವಿಹಾಳ ಕೆರೆ ಸೇರಿ ಮೂರು ಕೆರೆಗಳ ಭರ್ತಿ ಮಾಡುವ ಕಾರ್ಯ ಪೂರ್ಣ ಆಗಿಲ್ಲ. ಆದರೂ, ಕೆರೆಗಳಿಂದ ಜುಲೈವರೆಗೆ ನೀರು ಲಭ್ಯವಾಗಲಿದೆ ಎಂದು ನಗರಸಭೆಯಿಂದ ಹೇಳಲಾಗಿತ್ತು. ಇದೀಗ ನೀರಿನ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ ತುರ್ತು ಕ್ರಮಕ್ಕೆ ಮುಂದಾಗಬೇಕು. ಕೂಲಿ-ಕಾರ್ಮಿಕರು, ಬಡವರು ನೀರು ಸಂಗ್ರಹ ಮಾಡಿಕೊಳ್ಳಲು ಸಮಸ್ಯೆ ಇದೆ. ಹೀಗಾಗಿ ಅಂತಹ ವಾರ್ಡ್‌ಗಳನ್ನು ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಹುಸೇನ್ ಸಾಬ್, ಬಸವರಾಜ ಬಾದರ್ಲಿ, ಎಸ್.ದೇವೇಂದ್ರಗೌಡ, ನಾಗರಾಜ್ ಪೂಜಾರ್, ಬಸವರಾಜ ಬಾದರ್ಲಿ, ಬಸವರಾಜ ಕೊಂಡೆ, ಡಾ.ವಾಸೀಮ್, ಮಲ್ಲಿಕಾರ್ಜುನ ಕುರುಗೋಡು ಇದ್ದರು.