25.8 C
Bangalore
Monday, December 9, 2019

ಮುಳುಗಿದ ಹಡಗು ಮುಗಿಯದ ಸಮಸ್ಯೆ

Latest News

ಅತಂತ್ರದಿಂದ ಸುತಂತ್ರದೆಡೆಗೆ ಬಿಎಸ್​ವೈ ಸರ್ಕಾರ : 2018 ಮತ್ತು 19ರ ವಿಧಾನಸಭೆ ಸದಸ್ಯ ಬಲ ಬದಲಾವಣೆಯ ಚಿತ್ರಣ ಇಲ್ಲಿದೆ..

ಬೆಂಗಳೂರು: ಕಳೆದ ವಿಧಾನಸಭೆಯಲ್ಲಿ ಅತಂತ್ರ ಜನಾದೇಶ ಬಂದ ಕಾರಣ ಒಂದೂವರೆ ವರ್ಷ ಕಾಲ ರಾಜ್ಯವನ್ನು ರಾಜಕೀಯ ಅಸ್ಥಿರತೆ ಕಾಡಿತ್ತು. ಇದಕ್ಕೆ ಪರಿಹಾರ ಕಾಣಲು...

ಚಿತ್ರದುರ್ಗ,ಕಾಡಾನೆಗೆ ಡಾಂಟಿಂಗ್

ಚಿತ್ರದುರ್ಗ: ಕೊನೆಗೂ ಡಾಂಟಿಂಗ್ ಆದ ಕಾಡಾನೆ. ಜೋಗಿಮಟ್ಟಿ ಅರಣ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಬೀಡುಬಿಟ್ಟಿದ್ದ ಸಲಗ. ಅಭಿಮನ್ಯು ನೇತೃತ್ವದಲ್ಲಿ ಕಾರ್ಯಾಚರಣೆ. ನಂದಿಪುರ ವಡಗಟ್ಟೆ ಅರಣ್ಯದಲ್ಲಿ ಅರವಳಿಕೆ ಕೊಟ್ಟು ಹಗ್ಗ...

ಬೈ ಎಲೆಕ್ಷನ್​ ರಿಸಲ್ಟ್​| ಶಿವಾಜಿನಗರ ‘ಕೈ’ ಪಾಲಿಗೆ; ರಿಜ್ವಾನ್​ ಅರ್ಷಾದ್​ಗೆ 13,520ಮತಗಳ ಅಂತರದಿಂದ ಗೆಲುವು

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್​ ಅರ್ಷದ್​ 49,887 ಮತ ಗಳಿಸಿ, ಸಮೀಪದ ಸ್ಪರ್ಧಿ ಬಿಜೆಪಿಯ ಎಂ. ಶರವಣ ವಿರುದ್ಧ 13520 ಮತಗಳ...

ಕೊಟ್ಟ ಮಾತು ಉಳಿಸಿಕೊಂಡ ಸವದಿ

ಐಗಳಿ: ಅಥಣಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ...

ಅರಟಾಳದಲ್ಲಿ ಸಂಭ್ರಮಾಚರಣೆ

ಅರಟಾಳ: ಬಿಜೆಪಿ ಸರ್ಕಾರದಿಂದ ತಾಲೂಕಿನಲ್ಲಿ ಹಲಾವಾರು ಅಭಿವೃದ್ಧಿ ಕೆಲಸಗಳಾಗಿವೆ. ಡಿಸಿಎಂ ಲಕ್ಷ್ಮಣ ಸವದಿ ಅವರು ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿ ಪ್ರಭಾವ...

– ಲೋಕೇಶ್ ಸುರತ್ಕಲ್
ನವಮಂಗಳೂರು ಬಂದರಿನ ಹೊರವಲಯದಲ್ಲಿ ಮುಳುಗಿರುವ ಹಡಗುಗಳಿಂದ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಪರಿಸರ ಮಾಲೀನ್ಯದ ಜತೆಗೆ ಮೀನುಗಾರರಿಗೆ ಜೀವ ಹಾನಿಯ ಭೀತಿಯೂ ಎದುರಾಗಿದೆ.
ಇತ್ತೀಚೆಗೆ ಎನ್‌ಎಂಪಿಟಿ ಬಳಿ ಮುಳುಗಿದ ಡ್ರೆಜ್ಜರ್ ಹಡಗು ಅವಶೇಷ ಇರುವ ಬಗ್ಗೆ ಸಮುದ್ರದಲ್ಲಿ ಎಚ್ಚರಿಕೆ ಬೋಯೆ(ತೇಲುವ ಎಚ್ಚರಿಕೆ ದೀಪ) ಅಳವಡಿಸಿಲ್ಲ. ಈ ಹಿಂದೆ ನೀರುಪಾಲಾಗಿರುವ ಹಡಗುಗಳ ಸ್ಥಳದಲ್ಲೂ ಬೋಯೆ ಹಾಕಿಲ್ಲ. ಅಪಾಯ ಅರಿಯದೆ ಈ ಮಾರ್ಗದಲ್ಲಿ ಸಂಚರಿಸಿದ ಅನೇಕ ಟ್ರಾಲ್‌ಬೋಟ್‌ಗಳ ಬಲೆಗೆ ಹಾನಿಯಾಗಿ ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಘನ ಅವಶೇಷಕ್ಕೆ ಮೀನುಗಾರರ ಬೋಟ್‌ಗಳು ಬಡಿದು ಪ್ರಾಣಹಾನಿ ಸಾಧ್ಯತೆಯೂ ಇದೆ. ಫಿಶ್ ಫೈಂಡರ್‌ನಲ್ಲಿ ಬಂಡೆಕಲ್ಲುಗಳನ್ನು ಗುರುತಿಸಬಹುದು. ಆದರೆ, ಮುಳುಗಿದ ಹಡಗಿನ ಅವಶೇಷ ಪತ್ತೆಹಚ್ಚಲಾಗದು ಎಂದು ಮೀನುಗಾರರು ಹೇಳುತ್ತಾರೆ.

ಬೆಂಗ್ರೆ 5 ಹಡಗುಗಳು ನೀರುಪಾಲು
ಲಭ್ಯ ಮಾಹಿತಿ ಪ್ರಕಾರ, ಪಣಂಂಬೂರು ತಣ್ಣೀರುಬಾವಿ ಬೆಂಗ್ರೆ ಪರಿಸರದಲ್ಲಿ ಮುಳುಗಿರುವ ಹಡಗುಗಳ ಸಂಖ್ಯೆ ಐದು. ಉಳ್ಳಾಲ ಬ್ರೇಕ್ ವಾಟರ್ ಬಳಿ ಮುಳುಗಿರುವ ಬಾರ್ಜ್ ಸೇರಿದಲ್ಲಿ ಈ ಸಂಖ್ಯೆ ಆರಕ್ಕೇರುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

ಡೆನ್‌ಡೆನ್ ದುರಂತಕ್ಕೆ 12 ವರ್ಷ
2007ರ ಜೂನ್ 23ರಂದು ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಮತ್ತು ಇಂಜಿನ್ ಕೆಟ್ಟ ಕಾರಣದಿಂದ ತಣ್ಣೀರುಬಾವಿ ಕಿನಾರೆಯಲ್ಲಿ ಡೆನ್‌ಡೆನ್ ಹಡಗು ಮುಳುಗಿ ಮೂವರು ಸಾವನ್ನಪ್ಪಿದ್ದರು. ಈ ಹಡಗಿನ ಅವಶೇಷ, ತೀರಕ್ಕೆ ಇನ್ನೂ ಗೋಚರಿಸುತ್ತಿದೆ. ಇದರ ದಕ್ಷಿಣದಲ್ಲಿ ತಣ್ಣೀರುಬಾವಿ ಬೀಚ್ ತೀರ ಪ್ರದೇಶದಲ್ಲಿ ಸುಮಾರು 30 ವರ್ಷ ಹಿಂದೆ ಮುಳುಗಿರುವ ಓಷಿಯನ್ ಫೆಸಿಫಿಕ್ ಹಡಗಿನ ಅವಶೇಷವಿದೆ. ಮಂಗಳೂರು ಹಳೇ ಬಂದರು ಅಳಿವೆ ಬಳಿ ಮತ್ತೊಂದು ಹಡಗಿನ ಅವಶೇಷವಿದೆ. ಎನ್‌ಎಂಪಿಟಿ ಹೊರವಲಯದಲ್ಲಿ ಮುಳುಗಿರುವ ಚಾಲೆಂಜರ್ ಎಂಬ ಹಡಗಿನ ಅವಶೇಷ ಈಗ ಆಳ ಸಮುದ್ರದ ತಳ ಸೇರಿದೆ. ಕಳೆದ ಸೋಮವಾರ ತ್ರಿದೇವಿ ಪ್ರೇಮ್ ಡ್ರೆಜ್ಜರ್ ನೀರು ಪಾಲಾಗಿದೆ. ತ್ರಿದೇವಿ ಪ್ರೇಮ್ ಡ್ರೆಜ್ಜರ್ ಕಂಪನಿಗೆ ಸೇರಿದ ಇನ್ನೊಂದು ಡ್ರೆಜ್ಜರ್ ಭಗವತಿ ಪ್ರೇಮ್ ಆರು ತಿಂಗಳ ಹಿಂದೆಯೇ ಕೆಟ್ಟು ಹೋಗಿದ್ದು, ಅದನ್ನು ಈಗ ಆಳ ಸಮುದ್ರಕ್ಕೆ ಕೊಂಡೊಯ್ದು ನಿಲ್ಲಿಸಲಾಗಿದೆ. ಇದು ಕೂಡ ಮುಂದಿನ ದಿನಗಳಲ್ಲಿ ಮುಳುಗುವ ಸಾಧ್ಯತೆ ಇದೆ. ಮುಳುಗಿದ ಹಡಗುಗಳನ್ನು ಸಮುದ್ರದಲ್ಲಿ ಬಿಡಬಾರದು ಎಂದು ವಿಮಾ ಕಂಪನಿಗಳ ಶರ್ತವಿದ್ದರೂ ಕಂಪನಿಗಳು ನಿಯಮ ನಿರ್ಲಕ್ಷೃ ಮಾಡಿವೆ.

ಮುಳುಗಿದ ಹಡಗುಗಳು ಟ್ರಾಲ್‌ಬೋಟ್ ಮೀನುಗಾರಿಕೆಗೆ ಅಪಾಯಕಾರಿ. ಇವು ಸಮುದ್ರಮಾಲಿನ್ಯಕ್ಕೂ ಕಾರಣವಾಗುತ್ತಿವೆ.
ಜೀವನ್ ತಣ್ಣೀರುಬಾವಿ, ಮೀನುಗಾರ

Stay connected

278,751FansLike
584FollowersFollow
622,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...