ಚದುರಂಗದಲ್ಲಿ ಮೂವರು ರಾಜರು!

ಚೆಸ್ ಎಂದರೆ ಸಾಕು ಬುದ್ಧಿವಂತರ ಆಟ ಎನ್ನುವುದಿದೆ. ಬುದ್ಧಿವಂತಿಕೆ ಮತ್ತು ಚಾಕಚಕ್ಯತೆ ಇದ್ದವನಿಗೆ ಮಾತ್ರವೇ ಇದನ್ನು ಜಯಿಸಲು ಸಾಧ್ಯ. ಇಂತಹ ಆಟದಲ್ಲಿ ಮತ್ತೊಂದಿಷ್ಟು ಟ್ವಿಸ್ಟ್​ಗಳಿದ್ದರೆ ಹೇಗಿರುತ್ತದೆ? ಚೆಸ್ ಆಟವನ್ನು ಇಬ್ಬರ ಬದಲು ಮೂವರು ಕೂತು ಆಡುವಂತಿದ್ದರೆ! ಅಚ್ಚರಿಪಡಬೇಕಾಗಿಲ್ಲ. ಭಾರತದ ವಿದ್ಯಾರ್ಥಿ ಚೆಸ್ ಆಟಕ್ಕೆ ಇಂಥದ್ದೊಂದು ಹೊಸತನವನ್ನು ನೀಡಿದ್ದು, ಕಪು್ಪ- ಬಿಳಿಪು ಪಟ್ಟಿಗಳ ಜತೆಗೆ ಬೂದು ಬಣ್ಣದ ಪಟ್ಟಿಯನ್ನೂ ರೂಪಿಸಿದ್ದಾರೆ.

| ಅಕ್ಷತಾ ಮುಂಡಾಜೆ

ಟೆನಿಸ್, ಕ್ರಿಕೆಟ್, ಬ್ಯಾಡ್ಮಿಂಟನ್ ಹೀಗೆ ತರಹೇವಾರಿ ಆಟಗಳಿದ್ದರೂ ‘ಮೈಂಡ್ ಗೇಮ್ ಎಂದಾಗ ನೆನಪಾಗು ವುದು ಚೆಸ್. ಒಂದಡಿ ಇರುವ ಮೈದಾನದಲ್ಲಿ ಕಪು್ಪ ಬಿಳಿಪು ಪಟ್ಟಿಗಳ ನಡುವೆ ತನ್ನ ಸೈನ್ಯವನ್ನು ಗೆಲ್ಲಿಸಲು ಆಟಗಾರ ಸಾಕಷ್ಟು ಬುದ್ಧಿವಂತಿಕೆ ಬಳಸಲೇ ಬೇಕು. ಸ್ವಲ್ಪ ಎಡವಿದರೂ ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಬುದ್ಧಿವಂತಿಕೆ, ಚಾಕಚಕ್ಯತೆಯನ್ನು ಬಯಸುವ ಚೆಸ್ ಆಟ ಹುಟ್ಟಿಕೊಂಡಿದ್ದು, ಆರನೇ ಶತಮಾನದಲ್ಲಿ. ಗುಪ್ತ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಭಾರತದಲ್ಲಿ ಚದುರಂಗದಾಟ ಆರಂಭವಾಯಿತು. ಸೇನೆಯ ನಾಲ್ಕು ವಿಭಾಗಗಳೇ ಚದುರಂಗದ ಜೀವಾಳ. ನಂತರದ ದಿನಗಳಲ್ಲಿ ಇದು ಪರ್ಷಿಯನ್ನರನ್ನೂ ತಲುಪಿ ಶತ್​ರಂಜ್ ಆಯಿತು. ಹೀಗೆ ಕಾಲ ಕಾಲಕ್ಕೆ ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾಗಿವೆಯೇ ಹೊರತು ಆಟಕ್ಕೆ ಹೊಸದೊಂದು ರೂಪ ಸಿಕ್ಕಿರಲಿಲ್ಲ. ಐಐಟಿ ರೂರ್ಕಿಯ ವಿದ್ಯಾರ್ಥಿ ಆದಿತ್ಯ ನಿಗಮ್ ಚದುರಂಗಕ್ಕೆ ಹೊಸ ರೂಪ ನೀಡಿದ್ದು, ಇಬ್ಬರ ಬದಲು ಮೂವರು ಆಡಬಹುದಾದ ಚೆಸ್ ಅನ್ನು ರೂಪಿಸಿದ್ದಾರೆ. ಕಪು್ಪ- ಬಿಳಿ ಪಟ್ಟಿಗಳ ಜತೆಗೆ ಬೂದು ಬಣ್ಣದ ಪಟ್ಟಿಯೂ ಇದರಲ್ಲಿರಲಿದ್ದು, ಇದು ಮೂವರು ರಾಜರ ನಡುವಿನ ಹೋರಾಟವಾಗಿರುತ್ತದೆ. ಇದಕ್ಕೆ ‘ಟ್ರೖೆವಿಜಾರ್ಡ್’ ಎಂದು ಹೆಸರಿಡಲಾಗಿದೆ.

ಚೆಸ್ ಆಟದಲ್ಲಿ ಕಾಯುವ ಸಮಯವೇ ಹೆಚ್ಚಿದೆ ಎಂಬ ಕಾರಣಕ್ಕೆ, ಆದಿತ್ಯ ಇದನ್ನು ಬದಲಾಯಿಸಲು ಯೋಚಿಸಿದ್ದು ಐದನೇ ವಯಸ್ಸಿನಲ್ಲೇ. ಇಂಜಿನಿಯರಿಂಗ್​ಗೆ ಕಾಲಿಟ್ಟ ಬಳಿಕ ಈ ಬಯಕೆ ಹೆಚ್ಚುತ್ತಲೇ ಹೋಯಿತು. ಹೀಗಾಗಿ 2011ರಲ್ಲಿ ಸಂಶೋಧನೆ ಆರಂಭಿಸಿದರು. ನಾಲ್ಕೈದು ವರ್ಷಗಳ ಶ್ರಮದ ಬಳಿಕ ಈಗ ಯಶಸ್ಸು ಸಿಕ್ಕಿದೆ. ಇದರಲ್ಲಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಮಾನಸಿಕ ಆಟದ ಕ್ಲಿಷ್ಟತೆಯನ್ನು ಹೆಚ್ಚಿಸಲಾಗಿದೆ. ಹಿಂದೆ ಚೆಸ್ ಎಂದರೆ ಒಬ್ಬ ಎದುರಾಳಿಯ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಚಿಂತಿಸಿ ತನ್ನ ನಡೆ ಏನು ಎನ್ನುವುದನ್ನು ನಿರ್ಧರಿಸಬೇಕಾಗಿರುತ್ತಿತ್ತು. ಟ್ರೖೆವಿಜಾರ್ಡ್ ನಲ್ಲಿ ಇಬ್ಬರು ಎದುರಾಳಿಗಳ ಮುಂದಿನ ನಡೆಯೇನು ಎಂಬುದನ್ನು ಯೋಚಿಸಿ ಆಟ ಆಡಬೇಕು. ಇದರಿಂದ ಕ್ಲಿಷ್ಟತೆ ಹೆಚ್ಚು.

ಆನ್​ಲೈನ್ ವರ್ಷನ್ ಆರಂಭಕ್ಕೆ ಚಿಂತನೆ

ಗೇಮಿಂಗ್ ಇಂಡಸ್ಟ್ರಿಗೆ ಟ್ರೖೆವಿಜಾರ್ಡ್ ಚೆಸ್ ಅನ್ನು ಪರಿಚಯಿಸಲು ಆದಿತ್ಯ ಮುಂದಾಗಿದ್ದಾರೆ. ಇದೀಗ ಇದರ ಆನ್​ಲೈನ್ ವರ್ಷನ್ ಪರಿಚಯಿಸುವ ಉದ್ದೇಶ ಅವರಿಗಿದೆ. ಅಷ್ಟೇ ಅಲ್ಲದೆ ಟ್ರೖೆವಿಜಾರ್ಡ್ ತರಬೇತಿ ಕೇಂದ್ರಗಳನ್ನು ಆಧರಿಸಿ ಜಗತ್ತಿಗೆ ಹೊಸ ಆಟವನ್ನು ಪರಿಚಯಿಸಲು ಮುಂದಾಗಿರುವ ಇವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಬ್ಬರು ಆಡುವ ಚೆಸ್ ಭಾರತದಲ್ಲೇ ಹುಟ್ಟಿಕೊಂಡಿದ್ದು ಎಂದು ಇತಿಹಾಸ ಹೇಳುತ್ತದೆ. ಇದೀಗ ಈ ಚೆಸ್ ಹೊಸರೂಪ ಪಡೆದಿರುವುದು ಕೂಡ ಭಾರತದಲ್ಲೇ ಎನ್ನುವುದು ನಮ್ಮ ಹೆಮ್ಮೆ.

ಟೂರ್ನಮೆಂಟ್ ಆಯೋಜನೆ

ಆದಿತ್ಯ ಪ್ರಯತ್ನಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದ 2018ರ ಆಗಸ್ಟ್​ನಲ್ಲಿ ಐಐಟಿ ರೂರ್ಕಿಯಲ್ಲಿ ಟ್ರೖೆವಿಜಾರ್ಡ್ ಚೆಸ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಇದರಲ್ಲಿ ಆಡಿದವರು ಟ್ರೖೆವಿಜಾರ್ಡ್ ಬಗ್ಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಚದುರಂಗದಾಟಕ್ಕೆ ಮತ್ತೊಂದು ಹಂತದ ಕ್ಲಿಷ್ಟತೆಯನ್ನು ನೀಡಿದಂತಾಗಿದೆ. ಹಿಂದಿನ ವರ್ಷನ್​ಗೆ ಹೋಲಿಕೆ ಮಾಡಿದರೆ ಈ ಆಟದ ವೇಗ ಹೆಚ್ಚು. ಆದರೆ ಆ ಸೀಮಿತ ಸಮಯದಲ್ಲೇ ಎರಡು ಮನಸ್ಸಿನ ಆಟವನ್ನು ಅಳೆಯಬೇಕು. ಅಂತೂ ಪ್ರತಿಯೊಂದು ಕ್ಷಣವೂ ಆಟಗಾರ ಎಚ್ಚರಿಕೆಯಿಂದ ಇರಬೇಕು ಮತ್ತು ಎಚ್ಚರಿಕೆ ನಡೆ ಸಾಧಿಸಬೇಕು ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದವರು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಮೆಂಟ್ ಆಯೋಜನೆಯಿಂದ ಆದಿತ್ಯಗೆ ಮತ್ತಷ್ಟು ಹುರುಪು ಬಂದಿದೆ. ಯುವಕರಲ್ಲಿ ಚೆಸ್ ಆಟದ ಬಗ್ಗೆ ಆಸಕ್ತಿ ಹುಟ್ಟಿಸುವ ಸಲುವಾಗಿ ‘ಟ್ರೖೆವಿಜಾರ್ಡ್’ ರೂಪಿಸಿದ್ದಾಗಿ ಆದಿತ್ಯ ಹೇಳಿಕೊಂಡಿದ್ದಾರೆ. ಜತೆಗೆ ಇದರ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೊದಲು ಬಿಳಿ, ನಂತರ ಬೂದು ಮತ್ತು ಕಪು್ಪ ಆಟವಾಡುತ್ತದೆ ಎಂದು ಹೇಳಿದ್ದಾರೆ.