More

    PHOTOS|ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ

    ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವಕ್ಕೆ ನಾಡಿನೆಲ್ಲಡೆಯಿಂದ ಭಕ್ತ ಸಾಗರ ಹರಿದುಬಂದಿದೆ. ಶ್ರೀಗಳ ಗದ್ದುಗೆ ದರ್ಶನ ಮಾಡಿ ಭಕ್ತಗಣ ಪುನೀತರಾಗುತ್ತಿದ್ದಾರೆ. ಮಠದ ಅಂಗಳದಲ್ಲಿ ಎಲ್ಲೆಡೆ ಶಿವಕುಮಾರ ಶ್ರೀಗಳ ಹೆಸರು ಅನುರಣಿಸುತ್ತಿದ್ದು ಭಕ್ತಗಣ ಭಕ್ತಿಭಾವದಲ್ಲಿ ಮಿಂದೆದ್ದಿದ್ದಾರೆ.
    ಗದ್ದುಗೆಗೆ ವಿಶೇಷ ಪೂಜೆ: ಶ್ರೀಗಳ ಗದ್ದುಗೆಗೆ ಬೆಳಗಿನಜಾವ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಸಿದ್ಧಲಿಂಗ ಶ್ರೀಗಳು ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ರುದ್ರಾಕ್ಷಿ ಮಂಟಪದಲ್ಲಿ ಮೆರವಣಿಗೆ: ಶ್ರೀಗಳ ಭಾವಚಿತ್ರ ಇಟ್ಟು ರುದ್ರಾಕ್ಷಿ ಮಂಟಪದಲ್ಲಿ ಶ್ರೀಗಳ ಗದ್ದುಗೆಯಿಂದ ಶ್ರೀಮಠದ ಆವರಣದಲ್ಲಿ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗಿಯಾದರು.

    ಪುಣ್ಯಸ್ಮರಣೆ: ಸುತ್ತೂರು ಶ್ರೀಗಳು, ಸಿದ್ದಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳು, ಬೇಲಿಮಠದ ಶಿವರುದ್ರ ಶ್ರೀ, ಕನಕಪುರ ದೇಗುಲ ಮಠದ ಶ್ರೀಗಳು, ಸಚಿವರಾದ ಸಿ.ಟಿ.ರವಿ,‌ ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ತ, ಶಾಸಕರಾದ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಜಿ.ಬಿ.ಜ್ಯೋತಿ ಗಣೇಶ್, ಬಸವರಾಜಹೊರಟ್ಟಿ, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡುಶಿವಣ್ಣ ಉಪಸ್ಥಿತರಿದ್ದಾರೆ.

    ಬೆಳಗಿನಿಂದಲೇ ಪ್ರಸಾದ: ಶ್ರೀಮಠಕ್ಕೆ ನಾಡಿನ ಮೂಲೆ ಮೂಲೆಯಿಂದ ಹರಿದುಬರುತ್ತಿದ್ದು ಎಲ್ಲರಿಗೂ ಬೆಳಗಿನಿಂದಲೇ ಉಪಹಾರ ವ್ಯವಸ್ಥೆ ಮಾಡಲಾಗಿದೆ.

    ಶ್ರೀಗಳ ಕಂಚಿನ ಪುತ್ಥಳಿ: 16 ಕೋಟಿ ವೆಚ್ಚದ 14 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಬೆಂಗಳೂರಿನಲ್ಲಿ ಮುಂದಿನ ತಿಂಗಳು ಸಿಎಂ ಯಡಿಯೂರಪ್ಪ ಅನಾವರಣಗೊಳಿಸುವರು ಎಂದು ಸಚಿವ ವಿ.ಸೋಮಣ್ಣ ಪ್ರಕಟಿಸಿದರು. ಶ್ರೀಗಳಿಗೆ ಭಾರತರತ್ನ ಕೊಡುವಂತೆ ಈ ವೇದಿಕೆ ಮೂಲಕ ಸೋಮಣ್ಣ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಸಂದೇಶಪತ್ರವನ್ನು ಸೋಮಣ್ಣ ವಾಚಿಸಿದರು.

    ಚಿತ್ರರಚನೆ: ಕಲಾವಿದ ಪರಮೇಶ್ ಗುಬ್ಬಿ ತಮ್ಮ ಐದು ಕೈಬೆರಳನ್ನೇ ಕುಂಚವಾಗಿಸಿಕೊಂಡು ವೇದಿಕೆಯಲ್ಲಿ ರಚಿಸಿದ ಡಾ.ಶಿವಕುಮಾರಸ್ವಾಮೀಜಿ ಚಿತ್ರ ಗಮನಸೆಳೆಯಿತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts