More

    ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

    ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಕೊಚ್ಚಿನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಲು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿವರೆಗೂ ಕರೋನಾ ವೈರಸ್​ ಪೀಡಿತ​ ಪ್ರದೇಶದಿಂದ ಕೊಚ್ಚಿನ್​ಗೆ ಆಗಮಿಸಿರುವ 28 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆಗೆ ಒಳಗಾದ ವ್ಯಕ್ತಿಗಳಲ್ಲಿ ಕರೋನಾ ವೈರಸ್​ ಪತ್ತೆಯಾಗಿಲ್ಲ ಎಂದು ಕೊಚ್ಚಿನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನ ನಿಲ್ದಾಣದ ಅಂತಾರಾಷ್ಟ್ರೀಯ ಆಗಮನ ಪ್ರದೇಶದಲ್ಲಿ ನಿಯೋಜಿಸಲಾದ ಎಲ್ಲಾ ಅಧಿಕಾರಿಗಳಿಗೆ ವಿಶೇಷ ಮುಖವಾಡ ಹಾಗೂ ಕೈಗವಸುಗಳನ್ನು ವಿತರಿಸಲಾಗಿದೆ. ಅಲ್ಲದೆ ರಾಜ್ಯದಿಂದ ಚೀನಾಕ್ಕೆ ತೆರಳಿರುವ ಎಲ್ಲ ಪ್ರಯಾಣಿಕರ ವಿವರವನ್ನು ಜಿಲ್ಲಾ ವೈದ್ಯಾಧಿಕಾರಿಗಳಿಗೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

    ಕರೋನಾ ವೈರಸ್​ನಿಂದ ಹರಡುವ ರೋಗ ಮಾರಣಾಂತಿಕವಾಗಿದೆ. ಈ ವೈರಸ್ ಚೀನಾದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್​ನಲ್ಲಿ ಪತ್ತೆಯಾಗಿದೆ. ಈ ವೈರಸ್​ ಹರಡಿ ಇಲ್ಲಿವರೆಗೂ 9 ಮಂದಿ ಮೃತಪಟ್ಟಿದ್ದಾರೆ. 440 ಜನರಿಗೆ ಸೋಂಕು ತಗುಲಿದೆ ಎಂದು ಚೀನಾದ ವರದಿಗಳು ತಿಳಿಸಿವೆ.

    ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವುಹಾನ್ ನಿವಾಸಿಗಳು ನಗರ ಬಿಟ್ಟು ಎಲ್ಲ ತೆರಳದಂತೆ ಸೂಚನೆ ನೀಡಿದೆ. ‘
    ಕರೋನ ವೈರಸ್​ ಉಸಿರಾಟದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts