ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಆಚಾರ್ಯ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಅದರ ಜತೆಗೆ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಸಿದ್ಧತೆಗಳೂ ನಡೆಯುತ್ತಿವೆ. ಈ ಚಿತ್ರದಲ್ಲಿ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರಂತೆ.
ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿಯೇ ತ್ರಿಷಾ, ಚಿರಂಜೀವಿಗೆ ನಾಯಕಿಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ. ಆಗ ತ್ರಿಷಾ ಜಾಗಕ್ಕೆ ಕಾಜಲ್ ಅಗರ್ವಾಲ್ ಎಂಟ್ರಿಕೊಟ್ಟಿದ್ದರು. ಈಗ ‘ಲೂಸಿಫರ್’ ತೆಲುಗು ರಿಮೇಕ್ನಲ್ಲಿ ಚೆನ್ನೈ ಚೆಲುವೆಯನ್ನು ಕರೆತರುವ ಮಾತುಗಳು ಕೇಳಿಬಂದಿವೆ.
ಈ ಹಿಂದೆ ಅಂದರೆ 2006ರಲ್ಲಿ ಎ.ಆರ್ ಮುರುಗದಾಸ್ ನಿರ್ದೇಶನದ ‘ಸ್ಟಾಲಿನ್’ ಚಿತ್ರದಲ್ಲಿ ಚಿರಂಜೀವಿ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಇಂದಿನವರೆಗೂ ಈ ಜೋಡಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಹಾಗಾಗಿ ಒಂದು ವೇಳೆ ‘ಲೂಸಿಫರ್’ ರಿಮೇಕ್ನಲ್ಲಿ ನಟಿಸಿದ್ದೇ ಹೌದಾದರೆ, ಬರೋಬ್ಬರಿ 15 ವರ್ಷದ ಬಳಿಕ ಈ ಕಲಾವಿದರು ಮತ್ತೆ ಒಂದಾಗಲಿದ್ದಾರೆ. ಅಂದಹಾಗೆ, ಮೋಹನ್ ರಾಜಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. -ಏಜೆನ್ಸೀಸ್
ಇಲ್ಲ ಅಂದ್ರೆ ಕೈ ಕೊಯ್ತೀನಿ..; ಬೆತ್ತಲೆ ಫೋಟೋಗಾಗಿ 17 ವರ್ಷದ ಹುಡುಗಿಗೆ ಬ್ಲ್ಯಾಕ್ಮೇಲ್ ಮಾಡಿದ…
ಮಾವನಿಂದ ಅತ್ಯಾಚಾರಕ್ಕೀಡಾಗಿದ್ದ ಸೊಸೆ ಸಾವು; ಪತಿ ಮನೆಮುಂದೆಯೇ ಅಂತ್ಯಸಂಸ್ಕಾರಕ್ಕೆ ಪಟ್ಟು…