‘ಪವರ್’ಫುಲ್ ನಟಿ ತ್ರಿಶಾ ಮಾಲಿವುಡ್ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ನಟ ನಿವಿನ್ ಪೌಲಿ ಜತೆ ‘ಹೇ ಜ್ಯೂಡ್’ ಚಿತ್ರ ಮಾಡಿದ್ದ ತ್ರಿಶಾ, ಇದೀಗ ಮೋಹನ್ ಲಾಲ್ ಅಭಿನಯದ ‘ರಾಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ನಲ್ಲಿ ಕೂಡ ಭಾಗವಹಿಸಿದ್ದಾರೆ.
ಎರ್ನಾಕುಲಮ್ಲ್ಲಿ ‘ರಾಮ್ ಚಿತ್ರದ ಶೂಟಿಂಗ್ ಭರದಿಂದ ನಡೆದಿದೆ. ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ತ್ರಿಶಾ, ರಾಮ್ ಹೆಸರಿನ ಪಾತ್ರದಲ್ಲಿ ಮೋಹನ್ ಲಾಲ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಜೀತು ಜೋಸೆಫ್ ಆಕ್ಷನ್-ಕಟ್ ಹೇಳಿದ್ದು, ರಮೇಶ್ ಪಿಳ್ಳೆ ೖ ಮತ್ತು ಸುಧನ್ ಪಿಳ್ಳೆ ೖ ಬಂಡವಾಳ ಹೂಡಿದ್ದಾರೆ. ಕೇರಳ ಸುತ್ತಮುತ್ತ ಚಿತ್ರೀಕರಣ ನಡೆಸಲಿರುವ ಚಿತ್ರತಂಡ, ಬಳಿಕ ಟರ್ಕಿ, ಇಂಗ್ಲೆಂಡ್ನಲ್ಲೂ ಶೂಟಿಂಗ್ ಮಾಡಲಿದೆಯಂತೆ.
ಆಕ್ಷನ್-ಥ್ರಿಲ್ಲರ್ ಕಥಾಹಂದರದ ಈ ಸಿನಿಮಾದಲ್ಲಿ ಇಂದ್ರಜಿತ್ ಸುಕುಮಾರನ್, ದುರ್ಗಾ ಕೃಷ್ಣ, ಆದಿಲ್ ಹುಸೇನ್, ಲಿಯೋನಾ ಲಿಶೋಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸತೀಶ್ ಕುರುಪ್ ಛಾಯಾಗ್ರಹಣ, ವಿಷ್ಣು ಶ್ಯಾಮ್ ಸಂಗೀತ, ವಿನಾಯಕ್ ಸಂಕಲನ ಈ ಚಿತ್ರಕ್ಕಿದೆ.
ತ್ರಿಶಾ ನಟನೆಯ ತಮಿಳು ಚಿತ್ರ ‘ಪರಮಪಾದಂ ವಿಳಯಟ್ಟು’ ಇಂದು ಬಿಡುಗಡೆ ಆಗಲಿದೆ. ತಮಿಳಿನ ‘ರಾಂಗಿ’, ‘ಶುಗರ್’, ‘ಪೊನ್ನಿಯಿನ್ ಸೆಲ್ವನ್’, ತೆಲುಗಿನ ‘ಚಿರು 152’ ಚಿತ್ರಗಳ ಶೂಟಿಂಗ್ನಲ್ಲಿ ತ್ರಿಶಾ ಬಿಜಿ. ಇಷ್ಟೆಲ್ಲ ಚಿತ್ರಗಳ ನಡುವೆಯೂ ಮತ್ತೊಮ್ಮೆ ಮಾಲಿವುಡ್ ಪ್ರವೇಶಿಸಿ ‘ರಾಮ್ ಚಿತ್ರದ ಶೂಟಿಂಗ್ನಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಈ ಚಿತ್ರ ಇದೇ ವರ್ಷ ಓಣಂ ಹಬ್ಬಕ್ಕೆ ಬಿಡುಗಡೆ ಆಗಲಿದೆಯಂತೆ.