ಪರ್ವೀನ್​ ಬಯೋಪಿಕ್‌ನಲ್ಲಿ ತೃಪ್ತಿ?: ಬಾಲಿವುಡ್​ ಹಿರಿಯ ನಟಿಯ ಜೀವನಧಾರಿತ ಚಿತ್ರ

ಬಾಲಿವುಡ್ ಚಿತ್ರರಂಗದಲ್ಲಿ ಹಿರಿಯ ನಟಿ ಪರ್ವೀನ್​ ಬಾಬಿ ತಮ್ಮದೇ ಆದ ಮೈಲುಗಲ್ಲು ಸಾಧಿಸಿದವರು. 1973ರಲ್ಲಿ ‘ಚರಿತಾ’ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ಪರ್ವೀನ್​ ಬಳಿಕ ‘ಮಜ್‌ಬೂರ್’, ‘ದೀವಾರ್’, ‘ಅಮರ್ ಅಕ್ಬರ್ ಆಂಥೋನಿ’ ಸೇರಿ ಹಲವು ಹಿಟ್ ಸಿನಿಮಾ ನೀಡಿದ್ದರು. 1970ರಿಂದ 80ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಹಾಗೂ ‘ಗ್ಲಾಮರಸ್ ನಟಿ’ ಎಂಬ ಖ್ಯಾತಿ ಇವರಿಗಿತ್ತು. 1991ರಲ್ಲಿ ತೆರೆಕಂಡಿದ್ದ ‘ಇರಾದಾ’ ಸಿನಿಮಾದಲ್ಲಿ ನಟಿಸಿದ್ದ ಪರ್ವೀನ್​ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದರು. 2005ರಲ್ಲಿ ಅನಾರೋಗ್ಯದಿಂದಾಗಿ ಮೃತರಾಗಿದ್ದರು. ಪರ್ವೀನ್​ ಬಾಬಿ ಜೀವನ ಸಾಧನೆ, ಚಿತ್ರರಂಗದ ಪಯಣ ಹಾಗೂ ವೈಯಕ್ತಿಕ ಜೀವನ ಕುರಿತು ಲೇಖಕಿ ಕರೀಷ್ಮಾ ಉಪಾಧ್ಯಾಯ ಪುಸ್ತಕ ರಚಿಸಿದ್ದರು. ಇದೀಗ ಇದೇ ಪುಸ್ತಕ ಆಧಾರಿಸಿ ಪರ್ವೀನ್​ ಬಾಬಿ ಜೀವನಾಧಾರಿತ ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಈ ಚಿತ್ರದ ನಾಯಕಿಯಾಗಿ ಮೊದಲಿಗೆ ನಟಿ ಊರ್ವಶಿ ರೌಟೇಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಬದಲಾವಣೆಯಾಗಿದ್ದು, ಪರ್ವೀನ್​ ಪಾತ್ರದಲ್ಲಿ ‘ಅನಿಮಲ್’, ‘ಬ್ಯಾಡ್ ನ್ಯೂಸ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ನಿರ್ದೇಶಕರು, ನಿರ್ಮಾಪಕರ, ಕಲಾ ಬಳಗದ ಬಗ್ಗೆ ಮಾಹಿತಿ ಸಿಗಬೇಕಷ್ಟೇ. ತೃಪ್ತಿ ದಿಮ್ರಿ ಸದ್ಯ ‘ಭೂಲ್ ಭೂಲಯ್ಯ-3’, ‘ಧಡಕ್-2’ ಚಿತ್ರದಲ್ಲಿ ಬಿಜಿಯಿದ್ದಾರೆ. – ಏಜೆನ್ಸೀಸ್

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…