ಮೂವರ ಹತ್ಯೆಯಲ್ಲಿ ಕೊನೆಯಾದ ಆಸ್ತಿ ಕಲಹ, ಕೊಡಲಿಯಿಂದ ಕೊಚ್ಚಿ ಭೀಕರ ಕೊಲೆ

ಕಲಬುರಗಿ: ಆಸ್ತಿ ಕಲಹಕ್ಕೆ ಶುರುವಾದ ಕಲವು ಮೂವರ ಹತ್ಯೆಯೊಂದಿಗೆ ಕೊನೆಯಾಗಿದೆ. ದಾಯಾದಿಗಳ ನಡುವಿನ ಕಲಹವು ಮೂರು ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡುವ ಹಂತಕ್ಕೆ ಕರೆದೊಯ್ದಿದೆ.

ಸೇಡಂ ತಾಲೂಕಿನ ಮೇದಕ್ ಹೊರವಲಯದಲ್ಲಿ ಘಟನೆ ನಡೆದಿದ್ದು, ಹೊಲವೊಂದರಲ್ಲಿ ಮೂರು ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಲ್ಕಪ್ಪಾ(60), ಶಂಕ್ರಪ್ಪ(26) ಮತ್ತು ಚೆನ್ನಪ್ಪಾ(27) ಮೃತರು.

ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *