More

  ಜಾತಿ ತಾರತಮ್ಯ ಹೋಗಲಾಡಿಸಲು ತ್ರಿಪದಿಗಳು ಸಹಕಾರಿ

  ಕೋಲಾರ: ಸಮಾಜದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಕವಿ ಸರ್ವಜ್ಞ ತ್ರಿಪದಿಗಳು ಸಹಕಾರಿಯಾಗಿವೆ ಎಂದು ಜಿಪಂ ಯೋಜನಾ ನಿರ್ದೇಶಕ ರವಿಚಂದ್ರ ಹೇಳಿದರು.

  ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಗಣ್ಯರ ಸಾಧನೆಗಳು ಹಾಗೂ ಅವರು ಸಮಾಜದ ಸುಧಾರಣೆಗಾಗಿ ಪಟ್ಟ ಪರಿಶ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ. ಆ ಮೂಲಕ ಅವರನ್ನು ಸಮಾಜದಲ್ಲಿ ಸರಿ ದಾರಿಯಲ್ಲಿ ಕೊಂಡೊಯ್ಯಬೇಕು. ಈ ಪ್ರಯತ್ನ ಜಯಂತಿಗಳ ಆಚರಣೆಯಿಂದ ಆಗುತ್ತಿದೆ ಎಂದರು.
  ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ನಿರುದ್ಯೋಗಿಗಳು ಮುಂದಾಗಬೇಕು ಎಂದರು.
  ಭಾರತ ಕುಂಬಾರ ಫೆಡರೇಶನ್​ ಯುವ ಘಟಕದ ಅಧ್ಯಕ್ಷ ಡಾ.ಕೆ.ನಾಗರಾಜ್​ ಮಾತನಾಡಿ, ಸಮುದಾಯದವರ ಸಮಸ್ಯೆ, ಕುಂದುಕೊರತೆಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಇದು ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
  ಕುಂಬಾರ ಸಮುದಾಯವು ಸಣ್ಣ ಸಮುದಾಯ ಎಂದು ರ್ನಿಲಕ್ಷ್ಯ ತೋರಿದ್ದಾರೆ. ಮುಂದೆ ಸಮುದಾಯವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಇಲ್ಲದೇ ಹೋದರೆ ನಿರಂತರವಾಗಿ ಕಡೆಗಣಿಸುತ್ತಾರೆ. ನಮ್ಮಲ್ಲಿ ಹೆಸರಿಗಷ್ಟೇ ಕುಂಬಾರ ನಿಗಮ ಮಂಡಳಿ ರಚನೆಯಾಗಿದೆ. ಅದಕ್ಕೆ ಬಜೆಟ್​ನಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮುದಾಯದ ಸಂನೆಯಾಗಬೇಕು ಎಂದರು.
  ಜಿಲ್ಲಾ ಕುಂಬಾರ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ಸಣ್ಣ ಸಮುದಾಯಗಳನ್ನು ಎಂಎಲ್​ಎ, ಎಂಎಲ್ಸಿ, ಎಂಪಿಗಳು ರ್ನಿಲಕ್ಷ್ಯ ತೋರುತ್ತಿದ್ದಾರೆ. ಚುನಾವಣೆಗಳಲ್ಲಿ ನಿರ್ಣಾಯಕ ತೋರುವ ಮೂಲಕ ಎಚ್ಚರಿಕೆ ನೀಡಬೇಕಾಗಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಕುರುಬ ಸಮುದಾಯದ ವಸತಿ ನಿಲಯದಿಂದ ಸ್ತಬ್ಧಚಿತ್ರಗಳ ಮೆರವಣಿಗೆ ಪ್ರಾರಂಭವಾಗಿ ರಂಗಮಂದಿರದ ಬಳಿ ಅಂತ್ಯಗೊಂಡಿತ್ತು.
  ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್​.ಗೀತಾ, ಜವಳಿ ಮತ್ತು ಕೈಮಗ್ಗ ಇಲಾಖೆಯ ಮಂಜುನಾಥ್​, ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ಮುಖಂಡರಾದ ರೆಡ್ಡೆಪ್ಪ, ನಂದೀಶ್​, ನಾರಾಯಣಸ್ವಾಮಿ, ಚಿಕ್ಕರೆಡ್ಡೆಪ್ಪ, ಜ್ಞಾನಮೂರ್ತಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts