ರಾಯಬಾಗ: ತಾಲೂಕಿನ ಭೀರಡಿ ಕ್ರಾಸ್ ಬಳಿ ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ಚಿಂಚಲಿ ನಿವಾಸಿ ವಸಂತ ಸಿದ್ದು ಪಾತ್ರೋಟ (47) ಮೃತಪಟ್ಟ ವ್ಯಕ್ತಿ.
ಅಂಗವಿಕಲರಾಗಿದ್ದ ವಸಂತ, ಚಿಕ್ಕೋಡಿ ಆರ್‌ಟಿಒ ಆಫೀಸ್‌ಗೆ ತಮ್ಮ ಹೊಸ ತ್ರಿಚಕ್ರ ಬೈಕ್‌ನ ನೋಂದಣಿ ಮಾಡಿಸಲು ಚಿಂಚಲಿಯಿಂದ ಚಿಕ್ಕೋಡಿಗೆ ಹೋಗುತ್ತಿರುವಾಗ ಭೀರಡಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ.
ಹಿಂಬದಿ ಸವಾರ ರೇವಣ್ಣ ರೆಂಟೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.