ಹಿಟ್ನಳ್ಳಿ: ಸಾಧಿಸುವ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂದು ಕ್ರೀಡಾಪಟು, ಹಿಟ್ನಳ್ಳಿ ಗ್ರಾ.ಪ. ಸದಸ್ಯ ಪ್ರಶಾಂತ ರಾಠೋಡ ಹೇಳಿದರು.
ವಾರಾಣಸಿಯಲ್ಲಿ ನಡೆದ ರಾಷ್ಟ್ರಮಟ್ಟದ ಟೆನ್ನಿಸ್ ಪಂದ್ಯಾವಳಿಯಲ್ಲಿ ರಾಜ್ಯದಿಂದ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಹಿಟ್ನಳ್ಳಿ ಗ್ರಾ.ಪಂ. ಕಚೇರಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇನ್ನೊಬ್ಬ ಆಟಗಾರ ಶಿವರಾಜ ರಾಠೋಡ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ರತ್ನಾಬಾಯಿ ಮಾದರ, ಉಪಾಧ್ಯಕ್ಷ ಮಲ್ಲು ದೊಡಮನಿ, ಪಿಡಿಒ ವಿನೋದ ರಾಠೊಡ, ಗ್ರಂಥಾಲಯ ಮೇಲ್ವಿಚಾರಕ ರಮೇಶ ಕುಂಬಾರ, ಸದಸ್ಯರಾದ ಕಸ್ತೂರಿಬಾಯಿ ದೊಡಮನಿ, ಸಾಹೇಬಗೌಡ ಇಂಗಳಗಿ, ಲಾಳೆಸಾಹೇಬ ಚಟ್ಟರಕಿ, ಸೀತಾರಾಮ ರಾಠೋಡ, ಅನೀಲ ರಾಠೋಡ, ಗಡ್ಡೆಪ್ಪ ಹೊಸಮನಿ, ದಯಾನಂದ ನಾಯಿಕ, ಸಂಜೀವ ಹೊಸಮನಿ, ಮುಖಂಡರಾದ ಶೆಟ್ಟಿ ರಾಠೋಡ, ವೇಣು ರಾಠೋಡ, ಶರಣು ನಾಯ್ಕೋಡಿ ಇತರರಿದ್ದರು.