ಮಂಡ್ಯ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತ ಮಾತೆಯ ವೀರ ಸೈನಿಕರಿಗೆ ಕದಂಬ ಸೈನ್ಯ ಮತ್ತು ಭಾರತೀಯ ಕಿಸಾನ್ ಸಂಘ, ದಲಿತ ಸಂಘರ್ಷ ಸಮಿತಿಯಿಂದ ನಮನ ಸಲ್ಲಿಸಲಾಯಿತು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಲ್ಯಾನ್ಸ್ ನ್ಯಾಯಕ್, ದಿನೇಶ್‌ಕುಮಾರ್ ಶರ್ಮಾ, ಹವಾಲ್ದಾರ್ ಸೂರಜ್‌ಸಿಂಗ್, ಸಚಿನ್ ಯಾದವ್ ವಾನಂಜೆ, ಕಮಲ್ ಕಾಂಬೋಜ್, ಅಮಿತ್‌ಚೌದರಿ, ಎಂ.ಮುರಳಿ ನಾಯಕ್, ಸುಬೇದಾರ್ ಮೇಜರ್ ಪವನ್‌ಕುಮಾರ್, ಸಿದ್ದಪ್ಪ ಎಸ್.ಮಾದರ, ಬಿ.ಎಸ್‌ಎ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತಿಯಾಜ್, ಸುಬೇದಾರ್ ಮೇಜರ್ ಪವನ್‌ಕುಮಾರ್, ಐಎಎಸ್ ಅಧಿಕಾರಿ, ಐವರು ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಜನ್ಮ ಕೊಟ್ಟ ತಂದೆ, ತಾಯಿಗೆ ಮತ್ತು ಕುಟಂಬದವರಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶದ ಒಳ ಹಿತಶತ್ರುಗಳು ಅತ್ಯಂತ ಅಪಾಯಕಾರಿ. ಮಾತ್ರವಲ್ಲದೆ ಇವರು ಮೀರ್ ಸಾದಿಕ್‌ಗಳು. ಇಂತಹ ಭಯೋತ್ಪಾದಕರಿಗೆ ಸಮಾಜಘಾತುಕ ಶಕ್ತಿಗಳಿಗೆ ಆಶ್ರಯ ಬೆಂಬಲಕ್ಕೆ ನಿಂತಿದ್ದಾರೆ. ಇವರೇ ನಿಜವಾದ ದೇಶದ್ರೋಹಿಗಳು. ಇಂತಹವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಅಧ್ಯಕ್ಷ ರಮೇಶರಾಜು ಹಾಡ್ಯ, ಜಿಲ್ಲಾಧ್ಯಕ್ಷ ಬಿ.ಪಿ. ಅಪ್ಪಾಜಿ, ಮುಖಂಡರಾದ ಜೋಸ್ೆ ರಾಮು, ಸಲ್ಮಾನ್, ರಾಮು ಚಿಕ್ಕೇಗೌಡನದೊಡ್ಡಿ, ಡಾ.ಅಕ್ರಂ ಪಾಷ, ನವೀನ್‌ಕುಮಾರ್, ಶಿವಣ್ಣ, ಅಚ್ಚುತ, ರುದ್ರಪ್ಪ, ಸಿದ್ದರಾಜು ಇತರರಿದ್ದರು.
