ಚಂದು ನಿಧನಕ್ಕೆ ಶ್ರದ್ಧಾಂಜಲಿ

1 Min Read
ಚಂದು ನಿಧನಕ್ಕೆ ಶ್ರದ್ಧಾಂಜಲಿ
ಹನೂರಿನಲ್ಲಿ ದಸಂಸ ವತಿಯಿಂದ ಎಲ್. ಚಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿದ್ದರಾಜು, ವೀರ, ಮಹೇಶ್, ವಲ್ಲಿ, ಮುರುಗೇಶ್ ಇತರರು ಇದ್ದರು.

ಹನೂರು: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಎಲ್.ಚಂದು ನಿಧನ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ದಸಂಸ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಲ್.ಚಂದು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ದಸಂಸ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೊಂದ ಕುಟುಂಬಗಳಿಗೆ ಧ್ವನಿಯಾಗುವುದರ ಮೂಲಕ ಚಂದು ಮನ್ನಣೆ ಗಳಿಸಿದ್ದರು. ಜತೆಗೆ ಸಮಿತಿ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಸಮಿತಿ ಸಂಚಾಲಕ ವೀರ, ತಾಲೂಕು ಸಂಚಾಲಕ ಮಹೇಶ್, ಮಹಿಳಾ ಸಂಚಾಲಕಿ ವಲ್ಲಿ, ಪದಾಧಿಕಾರಿಗಳಾದ ಜಡೇಯಪ್ಪ, ಮುರುಗೇಶ್, ತಾಯಮ್ಮ, ಭಾಗ್ಯಮ್ಮ ಇದ್ದರು.

See also  ಜಿಲ್ಲೆಯ ಹಲವೆಡೆ ಭರ್ಜರಿ ಮಳೆ
Share This Article