ಮುದ್ದೇಬಿಹಾಳ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕೆಚ್ಚಲು ಕೋಯ್ದು ಗೋಮಾತೆಗೆ ಮಾಡಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಳ್ಳಲು ಶಾಸಕ ನಿವಾಸದ ಬಳಿ ಹೋಗಿದ್ದಾಗ ಪಿಎಸ್‌ಐ ಸಂಜಯ್ ತಿಪ್ಪರಡ್ಡಿ ನೀಡಿದ್ದ ಸ್ವಯಂಪ್ರೇರಿತ ದೂರಿನಡಿ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲುಪಾಲಾಗಿದ್ದ ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಯುವ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಹಿರೇಮುರಾಳ, ನಾಗೇಶ ಕವಡಿಮಟ್ಟಿ ಅವರು ಜಾಮೀನಿನ ಮೇಲೆ ಹೊರಗೆ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಾರ್ಮಹೌಸ್‌ನಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಪಕ್ಷದ ಮುಖಂಡರು ಸನ್ಮಾನಿಸಿದರು.
ಇವರು ಯಾವುದೇ ಕ್ರಿಮಿನಲ್ ಅಪರಾಧ ಎಸಗಿ ಜೈಲಿಗೆ ಹೋದವರಲ್ಲ. ಗೋಮಾತೆಗೆ ಆಗಿರುವ ಅನ್ಯಾಯ ಖಂಡಿಸಲು ಮುಂದಾಗಿದ್ದರು. ನಮ್ಮ ಸನಾತನ ಧರ್ಮ, ಹಿಂದು ಸಂಸ್ಕೃತಿಯಲ್ಲಿ ಗೋಮಾತೆಗೆ ಇರುವ ಮಹತ್ವ ಮನವರಿಕೆ ಮಾಡಿಕೊಡುವಾಗ ಸುಳ್ಳು ಕೇಸ್ ಅಡಿ ಜೈಲಿಗೆ ಹೋಗಿದ್ದರು. ಗೋಮಾತೆ ಕುರಿತಾದ ಇವರ ಕಾರ್ಯ, ಮನೋಭಾವ ಮತ್ತು ನಂಬಿಕೆಯನ್ನು ಪಕ್ಷದ ರಾಜ್ಯ, ರಾಷ್ಟ್ರೀಯ ಘಟಕಗಳು ಶ್ಲಾಸಿವೆ. ನಮ್ಮ ಪಕ್ಷಕ್ಕೂ ಇವರು ಹೆಮ್ಮೆ ತಂದಿದ್ದಾರೆ ಎಂದು ನಡಹಳ್ಳಿ ಶ್ಲಾಸಿದರು.
ಸನ್ಮಾನಿತರಾದ ಜಗದೀಶ, ಗಿರೀಶಗೌಡ, ಸಂಜು, ನಾಗೇಶ ಮಾತನಾಡಿ, ನಾವು ಜೈಲು ಪಾಲಾದಾಗ ನಡಹಳ್ಳಿ ಅವರು ಹಗಲು, ರಾತ್ರಿ ನಮ್ಮ ಪರ ಅವಿಶ್ರಾಂತವಾಗಿ ಕೆಲಸ ಮಾಡಿದ್ದರಿಂದ ನಮಗೆ ಎರಡೇ ದಿನಗಳಲ್ಲಿ ಜಾಮೀನು ದೊರೆಯುವಂತಾಗಿದೆ. ನಡಹಳ್ಳಿ ಅವರು ಸಾಮಾನ್ಯ ಕಾರ್ಯಕರ್ತರ ರಕ್ಷಣೆಗೆ ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ ಎನ್ನುವುದಕ್ಕೆ ಇದು ದೊಡ್ಡ ಉದಾಹರಣೆಯಾಗಿದೆ. ಕೆಲವು ಕಾರ್ಯಕರ್ತರು ನಡಹಳ್ಳಿ ಅವರ ಬಗ್ಗೆ ನಡೆಸಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ಕಾರ್ಯಕರ್ತರಿಗೆ ನಡಹಳ್ಳಿ ಅವರು ದೊಡ್ಡ ಶಕ್ತಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ನಾಲ್ವರೂ ಗೋಮಾತೆಗೆ ಪೂಜೆ ಸಲ್ಲಿಸಿ ಆಹಾರ ನೀಡಿ ನಮಿಸಿ ಗೌರವ ಸಲ್ಲಿಸಿದರು. ಪಕ್ಷದ ಜಿಲ್ಲಾ ಮತ್ತು ತಾಲೂಕು ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ನಾಲ್ವರ ದೇಶಾಭಿಮಾನ, ಗೋಮಾತೆಯ ಅಭಿಮಾನ ಶ್ಲಾಸಿದರು.