More

  ಡಿ.15ರಂದು ತ್ರಿಭುಜ ಚಿತ್ರ ಬೆಳ್ಳಿತೆರೆಗೆ: ನಿರ್ದೇಶಕ ಎಚ್.ವಿ.ಪುಟ್ಟಸ್ವಾಮಿ ಮಾಹಿತಿ

  ಮಂಡ್ಯ: ರಾಗಶ್ರೀ ಫಿಲಂಸ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ತ್ರಿಭುಜ ಚಿತ್ರವನ್ನು ಡಿ.15ರಂದು ರಾಜ್ಯದ ವಿವಿಧ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ದೇಶಕ ಎಚ್.ವಿ.ಪುಟ್ಟಸ್ವಾಮಿ ಹೇಳಿದರು.
  ಸ್ನೇಹ, ಪ್ರೀತಿ ಸಂಬಂಧಗಳ ನಡುವೆ ನಡೆಯುವ ತ್ರಿಕೋನ ಕಥೆಯಾಗಿದೆ. ಸೆಂಟಿಮೆಂಟ್, ಪ್ರೀತಿ, ಸಸ್ಪೆನ್ಸ್‌ನಿಂದ ಕೂಡಿದ ಕಥಾಹಂದರವನ್ನು ಒಳಗೊಂಡಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಮೈಸೂರಿನ ಅತಿಶಯ್ ಜೈನ್ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಜಗ್ಗು ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೆ.ಎಂ.ದೊಡ್ಡಿಯ ಎ.ಟಿ.ಕೃಷ್ಣ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಣೆ ಹೊಂದಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
  ನಾಯಕ ನಟ ಕ್ರಿಶ್ ಮಾತನಾಡಿ, ಇದು ನನ್ನ ನಾಲ್ಕನೇ ಚಿತ್ರವಾಗಿದೆ. ಕುಟುಂಬದ ಸದಸ್ಯರೆಲ್ಲರೂ ಕುಳಿತು ನೋಡುವಂತ ಕಥೆಯಾಗಿದೆ. ಚಿತ್ರವನ್ನು ಮಂಡ್ಯ ಜಿಲ್ಲೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ ಎಂದರು.
  ನಾಯಕ ನಟಿ ಕೃತಿಕಾ, ಹಂಚಿಕೆದಾರ ಸುರೇಶ್, ದೇವರಾಜು, ಆಂಜನಪ್ಪ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts