ಕೊಲೆಯಲ್ಲಿ ಅಂತ್ಯವಾದ ತ್ರಿಕೋನ ಪ್ರೇಮಕಥೆ: ಸ್ನೇಹಿತನನ್ನೇ ಕೊಂದ ಯುವಕ

ಬೆಂಗಳೂರು: ಒಬ್ಬಳು ಯುವತಿಗಾಗಿ ಇಬ್ಬರು ಸ್ನೇಹಿತರು ಜಗಳವಾಡಿಕೊಂಡ ಬಳಿಕ ಸ್ನೇಹಿತನನ್ನೇ ಯುವಕ ಹತ್ಯೆ ಮಾಡಿದ್ದಾನೆ.

ಒಬ್ಬಳು ಯುವತಿಯ ಹಿಂದೆ ಬಿದ್ದಿದ್ದ ಇಬ್ಬರು ಯುವಕರು ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಮೊಹಮ್ಮದ್‌ ಯೂಸುಫ್ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಬಿಳೇಕಹಳ್ಳಿ 5ನೇ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಘಟನೆ ಬಳಿಕ ಆರೋಪಿ ಸ್ನೇಹಿತ ಪರಾರಿಯಾಗಿದ್ದಾನೆ.

ಸ್ನೇಹಿತನ ಪತ್ತೆಗಾಗಿ ಜಾಲ ಬೀಸಿರುವ ಮೈಕೋ ಲೇಔಟ್ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್)