More

    29ರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭ

    ಮೈಸೂರು: ಕುಡುಮ ಶ್ರೀಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಟ್ರಸ್ಟ್‌ನಿಂದ ಫೆ. 29ರಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಎಂ.ಕೆ.ಮಹದೇವ ತಿಳಿಸಿದರು.
    ಕಳೆದ 42 ವರ್ಷಗಳಿಂದ ಪಾದಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಇದು 43ನೇ ಯಾತ್ರೆ. ಈ ರೀತಿಯ ಪಾದಯಾತ್ರೆಯಿಂದ ಅನಾರೋಗ್ಯ ದೂರವಾಗುತ್ತದೆ. ಶಾರೀರಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಫೆ.28ರಂದು ಸಂಜೆ 7 ಗಂಟೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪೂಜೆ ಸಲ್ಲಿಸಿ ಫೆ. 29ರ ಬೆಳಗಿನ ಜಾವ 4ಕ್ಕೆ ಪಾದಯಾತ್ರೆ ಆರಂಭಿಸಲಾಗುವುದು. ಇದು ನಿರಂತರವಾಗಿ 8 ದಿನದ ಪಾದಯಾತ್ರೆಯಾಗಿದ್ದು, ದಿನಕ್ಕೆ 30 ರಿಂದ 40 ಕಿ.ಮೀ. ಕ್ರಮಿಸಲಿದೆ. ಮಾರ್ಚ್ 8ರಂದು ಧರ್ಮಸ್ಥಳ ತಲುಪಲಿದೆ. ಸುಮಾರು 300 ಜನರು ಪಾಲ್ಗೊಳ್ಳಲಿದ್ದು. ಯಾವುದೇ ಶುಲ್ಕವಿಲ್ಲ. ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಟ್ರಸ್ಟ್‌ನಿಂದಲೇ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
    ಟ್ರಸ್ಟ್‌ನ ಪದಾಧಿಕಾರಿಗಳಾದ ಗೋಪಮ್ಮ, ಅಶೋಕ್, ಮಾದೇಶ್, ರಾಹುಲ್, ಸೋಮು ಹಾಸನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts