ವೃಕ್ಷ ಧ್ಯಾನ ಪ್ರಕೃತಿಯಲ್ಲಿ ಮನಸು ಅರಳಿಸುವ ಯೋಗ

blank

ವೃಕ್ಷ ಧ್ಯಾನ ಪ್ರಕೃತಿಯಲ್ಲಿ ಮನಸು ಅರಳಿಸುವ ಯೋಗಈಗಿನ ಯಾಂತ್ರಿಕ ತಂತ್ರಜ್ಞಾನದ ಯುಗದಲ್ಲಿ ಮಾನವ ತನ್ನ ನೈಜ ಸ್ವಭಾವ ನೆಲೆ, ಶ್ರೇಷ್ಠತೆಯ ತಳಹದಿಯನ್ನು ಮರೆತಿದ್ದಾನೆ. ಆತನು ತನ್ನ ನಿಜವಾದ ಶಾಂತಿಯ ಮೂಲವಾದ ಪ್ರಕೃತಿಯಿಂದ ದೂರವಾದಂತಾಗಿದೆ. ಆದ್ದರಿಂದ ಮರಗಳ ಸಾನಿಧ್ಯದಲ್ಲಿ ಧ್ಯಾನ ಮಾಡುವ ಪಥ, ಅಂದರೆ ‘ವೃಕ್ಷಧ್ಯಾನ’ ಇದನ್ನು ನವೀನ ಯುಗದ ಧ್ಯಾನಪಥದಂತೆ ಪರಿಗಣಿಸಬಹುದು.

ವೃಕ್ಷಗಳು ಶ್ರದ್ಧೆ, ಶಾಂತಿ, ಧೈರ್ಯ, ಕ್ಷಮೆ ಮತ್ತು ಪ್ರೀತಿ ಇತ್ಯಾದಿ ಭಾವನೆಗಳನ್ನು ಪ್ರತಿನಿಧಿಸುತ್ತವೆ. ಮರವನ್ನು ಅಪ್ಪಿಕೊಳ್ಳುವಾಗ ನಾವು ಪ್ರಪಂಚದೊಂದಿಗೆ ಜೀವಿಗಳೊಂದಿಗೆ ಜೋಡಣೆ ಹೊಂದುತ್ತೇವೆ. ಈ ಆಲಿಂಗನದಲ್ಲಿ ಅಂತರಂಗ ಶುದ್ಧವಾಗುತ್ತದೆ. ಇದು ಕೇವಲ ಶಾಂತಿಕಾರಕ ಕ್ರಿಯೆಯಲ್ಲ, ಇದು ಭಾವನಾತ್ಮಕ ಸಂಸ್ಕಾರ ನೀಡುವ ಶಿಕ್ಷಣದ ಬಹುಮುಖ್ಯ ಸಾಧನವಾಗಿದೆ. ಆಧುನಿಕ ಮಾನವ ಶಾಸ್ತ್ರ ಹೇಳುವುದು ನೈಸರ್ಗಿಕ ಆಸಕ್ತಿಯು ಮಕ್ಕಳಲ್ಲಿ ಅಥವಾ ಹಿರಿಯರಲ್ಲಿಯೇ ಆಗಲಿ ಸಹಾನುಭೂತಿ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಬೆಳೆಸುತ್ತದೆ. ವೃಕ್ಷ ಧ್ಯಾನವನ್ನು ಶಾಲೆಗಳಲ್ಲಿ ಅಥವಾ ಧ್ಯಾನ ಶಿಬಿರಗಳಲ್ಲಿ ಅಳವಡಿಸಿದರೆ ಭಾವನಾತ್ಮಕ ಬೆಳವಣಿಗೆಗೆ ಬಹುಪಾಲು ನೆರವಾಗುತ್ತದೆ.

ಯೋಗಿಗಳ ಪಾವನ ಸ್ಥಳ-ವೃಕ್ಷಸಾನ್ನಿಧ್ಯ: ಋಷಿಗಳು ಮುನಿಗಳು ತಪಸ್ವಿಗಳು ತಮ್ಮ ಸಾಧನೆಗೆ ಅರಣ್ಯವನ್ನೇ ಆರಿಸಿಕೊಂಡು ಮರಗಳ ಅಡಿ ತಪಸ್ಸು ಮಾಡುತ್ತಿದ್ದರು. ಶ್ರೀರಾಮನು ಅಶ್ವತ್ಥ ವೃಕ್ಷದಡಿ ಕುಳಿತು ಧ್ಯಾನ ಮಾಡಿದ್ದನು. ಬುದ್ಧನು ಬೋಧಿವೃಕ್ಷದಡಿಯಲ್ಲಿ ಜ್ಞಾನದ ಬೆಳಕನ್ನು ಪಡೆದನು. ಭಗವದ್ಗೀತೆಯ ಮಹಾ ಯೋಗೋಪದೇಶವು ಕುರುಕ್ಷೇತ್ರದಲ್ಲಿದ್ದ ವೃಕ್ಷದ ಸಾನ್ನಿಧ್ಯದಲ್ಲೇ ಅಂದರೆ ಪ್ರಕೃತಿಯ ಪ್ರತಿರೋಧ ಶಕ್ತಿಯಲ್ಲಿ ಉಗಮವಾಯಿತು. ಎಲ್ಲವೂ ವೃಕ್ಷಸಾನ್ನಿಧ್ಯದ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.

ಚಿತ್ತ ಶುದ್ದಿ-ಧ್ಯಾನದ ಮೂಲಭೂಮಿ: ಚಿತ್ತಶುದ್ದಿ ಎಂದರೆ ಮನಸ್ಸನ್ನು ಪವಿತ್ರ ಗೊಳಿಸುವುದು. ಅಶುದ್ಧ ಭಾವನೆಗಳನ್ನೆಲ್ಲವ ಬಿಟ್ಟು ಪ್ರಜ್ಞಾವಂತ ಸ್ಥಿತಿಗೆ ತಲುಪುವುದು. ವೃಕ್ಷ ಧ್ಯಾನದಲ್ಲಿ ನಿರಂತರ ಉಸಿರಾಟ ಮತ್ತು ಮರದ ಪ್ರಭಾವಲಯ – ಶಕ್ತಿಯೊಂದಿಗೆ ಅಂತರಂಗ ಶುದ್ದಿ ಸಹಜವಾಗಿ ನಡೆಯುತ್ತದೆ. ಯೋಗಶಾಸ್ತ್ರದಲ್ಲಿ – ‘ಚಿತ್ತ ಶುದ್ಧೌ ಯೋಗಸಿದ್ಧಿ:’ ಎಂಬುದಾಗಿ ಶುದ್ಧ ಚಿತ್ತವಿಲ್ಲದೆ ಯೋಗ ಸಿದ್ಧಿ ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ.

ಧ್ಯಾನಪಥ – ವೃಕ್ಷ ಧ್ಯಾನ ಪಾಠ : ಇದನ್ನು ಪ್ರತಿದಿನ ಧ್ಯಾನ ಪಾಠವಾಗಿ ಬಳಸಬಹುದು : ವೃಕ್ಷ ಧ್ಯಾನ ಮಂತ್ರ: ’ಓಂ ವೃಕ್ಷಾಯ ನಮಃ | ಶಾಂತಿ ಸ್ವರೂಪಿಣಿ ನಮಃ | ಮಮ ಚಿತ್ತ ಶುದ್ಧಿಂ ಕರುತು |’

ಧ್ಯಾನ ಶ್ಲೋಕ : ನ ತೇ ಮರಾ ನರಕೇ ಗಚ್ಚನ್ ಯೋ ವೃಕ್ಷಂ ಸಂಪ್ರಣಮ್ಯತಿ| ಪ್ರತೀಶ್ಚ ಭಕ್ತಿಶ್ಚ ತಸ್ಯಾ ಪ್ರಾಪ್ನೋ›ತಿ ಭಗವಾನ್ ಸ್ಮ›ತಿಂ||’

 

ಧ್ಯಾನ ವಿಧಾನ

1. ನಮಗೆ ಪ್ರಿಯವಾದ ಮರವನ್ನು ಆರಿಸಿಕೊಳ್ಳಬೇಕು.

2. ಮರವನ್ನು ನಮ್ಮ ‘ಸ್ನೇಹಿತ’, ‘ಮಾತನಾಡುವ ಮಗಳು’, ‘ಆ ಮರ ನನಗೆ ತಾಯಿ’ ಎಂಬ ಭಾವನೆ ಮೂಡಿಸಿಕೊಳ್ಳಬೇಕು.

3.ಧ್ಯಾನಕ್ಕೂ ಮೊದಲು ನಿಶ್ಶಬ್ದವಾಗಿ ಮರದ ಪಕ್ಕ ನಿಂತು ಒಂದು ಪ್ರಶ್ನೆ ಕೇಳಿ: ‘ಈ ಮರ ನನಗೆ ಏನು ಹೇಳುತ್ತಿದೆ?’

4.ಮರದ ಬಳಿ ಸುಸ್ಥಿರವಾಗಿ ಕುಳಿತುಕೊಳ್ಳಿ ಅಥವಾ ಅಪ್ಪಿಕೊಳ್ಳಿ.

5.ಮೂರು ಬಾರಿ ಆಳವಾದ ಉಸಿರಾಟ ನಡೆಸಿ ಮರಕ್ಕೂ ನಿಮ್ಮ ಉಸಿರಾಟಕ್ಕೂ ಸಾಮರಸ್ಯ ಹೊಂದಾಣಿಕೆ ತಂದುಕೊಳ್ಳಿ. ವೃಕ್ಷಧ್ಯಾನ ಮಂತ್ರವನ್ನು ಮೂರು ಬಾರಿ ಜಪಿಸಿ.

6.ನಂತರ ಶುದ್ಧ ಮೌನದಲ್ಲಿ ಮರದ ವಾಸನೆ, ಸ್ಪರ್ಶ, ಶಬ್ದ ಚಿಂತನೆಗಳ ತಾಳಮೇಳವನ್ನು ಅನುಭವಿಸಿ.

7.ಮನಸ್ಸಿನಲ್ಲಿ ಬರುವ ಎಲ್ಲಾ ಭಾವನೆಗಳು ತಿಳಿದುಕೊಳ್ಳುವುದನ್ನು ಸಂಸ್ಕಾರ ಪಡೆಯುವುದನ್ನು ನಿರಾಳತೆಯ ಅನುಭೂತಿ ಹೊಂದುವುದನ್ನು ಅನುಭವಿಸಿ.

8.ಸುಮಾರು 10 ರಿಂದ 20 ನಿಮಿಷ ಮಾಡಬಹುದು.ಪ್ರಕೃತಿ ನಮ್ಮ ಮೊದಲ ಗುರು. ಮರಗಳು ಆಧ್ಯಾತ್ಮಿಕ ಪಾಠವನ್ನು ನಿಸ್ವಾರ್ಥವಾಗಿ ಕಲಿಸುತ್ತವೆ. ಮೌಲ್ಯಗಳನ್ನು ಬೆಳೆಸಲು, ಕೋಪ ಹೆಮ್ಮೆಗಳನ್ನು ಬಿಡಿಸಲು ಕಲಿಸುತ್ತದೆ. ವೃಕ್ಷ ಧ್ಯಾನ ನಮಗೆ ಇವೆಲ್ಲ ಪಾಠಗಳನ್ನು ಪ್ರತಿದಿನ ಕಲಿಸುತ್ತದೆ. ಮರಗಳನ್ನು ಅಪ್ಪಿಕೊಂಡಾಗ ಅದು ಕೇವಲ ವೃಕ್ಷವಲ್ಲ, ಅದು ಯೋಗಿಕ ಜೀವನವೆನಿಸುತ್ತದೆ.

(ಪ್ರತಿಕ್ರಿಯಿಸಿ: [email protected])

Share This Article

ಈರುಳ್ಳಿ ಕತ್ತರಿಸುವಾಗ ಹೀಗೆ ಮಾಡಿದರೆ ಕಣ್ಣೀರೇ ಬರುವುದಿಲ್ಲ..ನೀವೂ ಒಮ್ಮೆ ಟ್ರೈ ಮಾಡಿ | Onions

Onions: ಈರುಳ್ಳಿ ಕತ್ತರಿಸುವುದು ಅನೇಕರಿಗೆ ಕಷ್ಟದ ಕೆಲಸವಾಗಿದೆ. ಕೆಲವರು ಯಾವುದೇ ಸಮಸ್ಯೆಯಿಲ್ಲದೆ ಈರುಳ್ಳಿಯನ್ನು ಕತ್ತರಿಸಿದರೆ, ಇತರರು…

ನೀವು ರಾತ್ರಿಯಿಡೀ ಫೋನ್ ಚಾರ್ಜಿಂಗ್ ಹಾಕಿಟ್ಟು ಮಲಗುತ್ತಿದ್ದೀರಾ? ಇರಲಿ ಎಚ್ಚರಿಕೆ… mobile charge

mobile charge:  ಸ್ಮಾರ್ಟ್‌ಫೋನ್ ಇಲ್ಲದೆ ಸಾಮಾನ್ಯ ಜೀವನವನ್ನು ಸುಗಮವಾಗಿ ನಡೆಸಲು ಸಾಧ್ಯವಾಗದ ಹಂತವನ್ನು ಪ್ರತಿಯೊಬ್ಬರೂ ತಲುಪಿದ್ದಾರೆ.…