ಮರ ಬಿದ್ದು ಹೊಸ ಕಾರು ಜಖಂ

ಬೆಳಗಾವಿ: ಇಲ್ಲಿನ ಭಾಗ್ಯ ನಗರ ಎರಡನೆ ಕ್ರಾಸ್ ಬಳಿ ತಡ ರಾತ್ರಿ ಮರವೊಂದು ಧರೆಗೆ ಉರುಳಿ ಬಿದ್ದಿದೆ. ರಸ್ತೆ ಮೇಲೆ ನಿಲ್ಲಿಸಿದ್ದ ಗೋವಿಂದ ಹರ್ಡಿಕರ ಎಂಬುವರ ಹೊಸ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದೆ. ಯಾವುದೆ ಪ್ರಾಣ ಹಾನಿ, ಗಾಯ ಸಂಭವಿಸಿಲ್ಲ.

ಅರಣ್ಯ ಇಲಾಖೆ ಆಧಿಕಾರಿಗಳು ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ಸದ್ಯಕ್ಕೆ ಯಾವುದೆ ದೂರು ದಾಖಲಾಗಿಲ್ಲ ಎಂದು ದಕ್ಷಿಣ ಸಂಚಾರಿ ಠಾಣೆ ಪೊಲಿಸರು ತಿಳಿಸಿದ್ದಾರೆ.