ಶಾಲಾ ಬಸ್​ ಮೇಲೆ ಉರುಳಿ ಬಿದ್ದ ಮರ: ವಿದ್ಯಾರ್ಥಿಗಳು ಅಪಾಯದಿಂದ ಪಾರು

ಮಂಗಳೂರು: ನಗರದ ನಂತೂರು ವೃತ್ತದ ಬಳಿ ಶಾಲಾ ಬಸ್​ ಮೇಲೆ ಮರವೊಂದು ಉರುಳಿಬಿದ್ದಿದ್ದು ಅದೃಷ್ಟವಶಾತ್​ ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಕೇಂಬ್ರಿಜ್​ ಶಾಲಾ ವಾಹನ ಪಂಪ್​ವೆಲ್​ ಕಡೆಯಿಂದ ಬರುತ್ತಿತ್ತು. ನಂತೂರು ವೃತ್ತದ ಬಳಿ ಏಕಾಏಕಿ ಮರ ಮುರಿದು ಬಸ್​ ಮೇಲೆ ಬಿದ್ದಿದೆ. ಒಟ್ಟು 17 ವಿದ್ಯಾರ್ಥಿಗಳು ಈ ಬಸ್​ನಲ್ಲಿ ಇದ್ದರು. ಯಾರಿಗೂ ಯಾವುದೇ ಅಪಾಯವಾಗಲಿಲ್ಲ.

ಮರ ಬೀಳುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿಗಳೆಲ್ಲ ಕೂಗಾಡಿದ್ದಾರೆ. ತಹಸೀಲ್ದಾರ್ ಗುರುಪ್ರಸಾದ್ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು.

Leave a Reply

Your email address will not be published. Required fields are marked *