ಉಚಿತ ಸೇವೆ ಒದಗಿಸುವ ‘ಸಾಯಿ ಧನ್ವಂತರಿ’ ಸಂಚಾರಿ ದಂತ ಹಾಗೂ ವೈದ್ಯಕೀಯ ಆಸ್ಪತ್ರೆ ಲೋಕಾರ್ಪಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 8 ಕುಗ್ರಾಮಗಳಿಗೆ ಉಚಿತ ಸೇವೆ ಒದಗಿಸುವ ‘ಸಾಯಿ ಧನ್ವಂತರಿ’ ಸಂಚಾರಿ ದಂತ ಹಾಗೂ ವೈದ್ಯಕೀಯ ಆಸ್ಪತ್ರೆ ಭಾನುವಾರ ಲೋಕಾರ್ಪಣೆಯಾಗಿದೆ.

ಯುಎಸ್ಎ ಪ್ರಶಾಂತಿ ಟ್ರಸ್ಟ್ ಹಾಗೂ ಸತ್ಯ ಸಾಯಿ ಟ್ರಸ್ಟ್ ಕರ್ನಾಟಕ ನಿಂದ ಆಸ್ಪತ್ರೆ ಸಿದ್ಧಪಡಿಸಿದ್ದು, ಅದೇ ಸಂಸ್ಥೆಯಿಂದ ನಡೆಸಲಾಗುತ್ತಿದೆ. ಜಿಲ್ಲೆಯ ಐದಕ್ಕೂ ಹೆಚ್ಚು ವೈದ್ಯರು ಈ ವಾಹನದ ಜತೆಗೆ ತೆರಳಿ ಉಚಿತ ಸೇವೆ ನೀಡಲಿದ್ದಾರೆ.

ಸಂಸದ ಅನಂತ ಕುಮಾರ ಹೆಗಡೆ ಸಂಚಾರಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು. ಶಾಸಕಿ ರೂಪಾಲಿ ನಾಯ್ಕ, ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ನಾಗೇಶ ಜಿ.ಧಾಕಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ರವಿ ಡಬೀರ್, ಡಾ.ಪದ್ಮನಾಭ ಪೈ, ಡಾ.ಡಿ.ಬಿ.ಸುಂದರೇಶ ಅತಿಥಿಯಾಗಿದ್ದರು. ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ರಾಮದಾಸ‌ ಆಚಾರಿ ಸ್ವಾಗತಿಸಿದರು.