ಕಸದ ರಾಶಿಯಲ್ಲಿ ಭಯಂಕರ ಸ್ಫೋಟ, 2 ಅಡಿ ಕಂದಕ ನಿರ್ಮಾಣ: ಪರಿಶೀಲನೆ ಮಾಡಿದಾಗ ಸಿಕ್ಕಿದ್ದೇನು?

ಮೈಸೂರು: ಪಿರಿಯಾಪಟ್ಟಣದ ಬೆಟ್ಟದಪುರ ಗ್ರಾಮದಲ್ಲಿ ಕಸದ ರಾಶಿಯಿಂದ ಭಯಂಕರ ಸ್ಫೋಟದ ಶಬ್ದ ಕೇಳಿಬಂದಿದ್ದು, ಜನರು ಭಯಭೀತರಾಗಿದ್ದಾರೆ.

ಬೆಟ್ಟದಪುರದ ಸರ್ಕಾರಿ ಸ್ಥಳದಲ್ಲಿ ಕಸ ಶೇಖರಣೆಯಾಗಿತ್ತು. ನಿನ್ನೆ ಸಂಜೆ ಈ ಕಸದ ರಾಶಿ ಮಧ್ಯೆ ಸ್ಫೋಟವಾಗಿದ್ದು ಭಯಂಕರ ಸದ್ದಾಗಿದೆ. ಇದು ಸುಮಾರು 4 ಕಿ.ಮೀ.ವರೆಗೂ ಕೇಳಿಸಿದೆ. ಸ್ಫೋಟದ ರಭಸಕ್ಕೆ ಕಸದ ರಾಶಿ ಚೆಲ್ಲಾಪಿಲ್ಲಿಯಾಗಿ ಹೊತ್ತಿ ಉರಿದಿದೆ. ಸ್ಥಳದಲ್ಲಿ 2 ಅಡಿ ಕಂದಕ ನಿರ್ಮಾಣವಾಗಿದ್ದು ದಟ್ಟ ಹೊಗೆ ಆವರಿಸಿದೆ.

ಬೆಟ್ಟದಪುರ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಸ್ಫೋಟಕ್ಕೆ ಕಾರಣ ಯುಪಿಎಸ್​ ಬ್ಯಾಟರಿ ಕಾರಣ ಎಂದು ತಿಳಿದುಬಂದಿದೆ.