24.6 C
Bangalore
Saturday, December 7, 2019

ಸಿನಿರಂಗದ ಶೇ.40 ವಹಿವಾಟು ನಗದು

Latest News

ಚನ್ನಪಟ್ಟಣ ತಾಲೂಕಿನ ಗಡಿಗ್ರಾಮ ಹೊನ್ನಾನಾಯಕನಹಳ್ಳಿ ಕೆರೆಗೆ ಹರಿದ ನೀರು

ಚನ್ನಪಟ್ಟಣ: ತಾಲೂಕಿನ ಗಡಿಗ್ರಾಮ ಹೊನ್ನಾನಾಯಕನಹಳ್ಳಿ ಕೆರೆಗೆ ನೀರು ತುಂಬಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಚಾಲನೆ ನೀಡುವ ಮೂಲಕ ಆ ಭಾಗದ ಜನತೆಯ ಆಕ್ರೋಶವನ್ನು ಕೊಂಚ...

ಬೆಳಗಾವಿ: ಉದ್ಯಾನಗಳಲ್ಲಿ ಪ್ರೇಮ ಸಲ್ಲಾಪ

|ಜಗದೀಶ ಹೊಂಬಳಿ ಬೆಳಗಾವಿ ‘ಏಳಿ... ಎದ್ದೇಳಿ. ಗುರಿ ಮುಟ್ಟುವವರೆಗೆ ನಿಲ್ಲದಿರಿ. ಈ ಅಲ್ಪ ಜೀವನವನ್ನು ದೇಶಕ್ಕಾಗಿ ಬಲಿದಾನ ಮಾಡೋಣ...’ ಎಂದು ಸ್ವಾಮಿ ವಿವೇಕಾನಂದರು ದೇಶದ...

ಕುಸಿಯುವ ಹಂತದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ತಂಗಿದ್ದ ಕಣ್ವ ಸರ್ಕಾರಿ ಶಾಲೆ ಕಟ್ಟಡ

ರಾಮನಗರ: ವಿಶ್ವದ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್.ಎಂ.ವಿಶ್ವೇಶ್ವರಯ್ಯ ಅವರು ತಂಗಿದ್ದ ಶಾಲಾ ಕಟ್ಟಡ ಇದೀಗ ಕುಸಿಯುವ ಹಂತಕ್ಕೆ ತಲುಪಿದ್ದು, ಕೂಡಲೇ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ತಾಲೂಕಿನ ಗಡಿ...

ಉನ್ನಾವೋ ರೇಪ್ ಕೇಸ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಗಳ ಮೇಲೆ ಪೆಟ್ರೋಲ್ ಸುರಿದ ತಾಯಿ!

ನವದೆಹಲಿ: ಉನ್ನಾವೋದ ಸಿಂಧುನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಸುಟ್ಟುಕೊಂದ ಆರೋಪಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳ ಮೇಲೆಯೇ...

ಸಂವಿಧಾನದ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಿದ ಬಾಬಾ ಸಾಹೇಬ್

ರಾಮನಗರ: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಬದುಕಿನ ಭಾಗವಾಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳಿದರು. ನಗರದ...

ಬೆಂಗಳೂರು: ಸ್ಯಾಂಡಲ್​ವುಡ್ ನಟರು, ನಿರ್ವಪಕರ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಕೆಲ ಸಿನಿಮಾ ವಹಿವಾಟು ಶೇ. 30ರಿಂದ 40 ನಗದು ರೂಪದಲ್ಲಿ ನಡೆದಿದೆ ಎಂದು ಕರ್ನಾಟಕ ಗೋವಾ ವಲಯದ ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ಹೇಳಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರಿಗೆ ವಿವರ ನೀಡಿದರು,

ದಾಳಿಗೊಳಗಾದ ನಟರು, ನಿರ್ವಪಕರು 109 ಕೋಟಿ ರೂ. ಅಕ್ರಮ ಆಸ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಅವರನ್ನು ವಿಚಾರಣೆಗೆ ಕರೆದಿದ್ದೇವೆ. ತನಿಖೆ ಬಳಿಕ ಇನ್ನಷ್ಟು ಅಕ್ರಮ ಆಸ್ತಿ ಬೆಳಕಿಗೆ ಬರುವ ಸಾಧ್ಯತೆ ಇದೆ. ಕೆಲ ಸಿನಿಮಾ ನಿರ್ಮಾಣ ಸಂಪೂರ್ಣವಾಗಿ ನಗದು ರೂಪದಲ್ಲಿ ನಡೆದಿದೆ. ಚಲನಚಿತ್ರ ಮಂದಿರದಲ್ಲಿ ತೆರಿಗೆ ಪಾವತಿಸದೆ ಸಂಗ್ರಹವಾದ ನಗದು ನಿರ್ವಪಕರ ಕೈ ಸೇರಿದೆ. ಚಿತ್ರೀಕರಣ, ನಟರ ಸಂಭಾವನೆಯೂ ನಗದು ರೂಪದಲ್ಲಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.

ನಗದು ವ್ಯವಹಾರದಲ್ಲಿ ಹೆಚ್ಚಿನ ತೆರಿಗೆ ವಂಚನೆ ನಡೆಯುತ್ತದೆ. ಇವರೂ ಯಾವುದೇ ದಾಖಲೆಗಳಿಲ್ಲದೆ ನಗದು ವ್ಯವಹಾರ ನಡೆಸಿದ್ದಾರೆ. ದಾಳಿಗೊಳಗಾದ ನಟರು, ನಿರ್ವಪಕರು ಸೇವಾ ತೆರಿಗೆ, ಮನರಂಜನಾ ತೆರಿಗೆ, ಜಿಎಸ್​ಟಿ ಮತ್ತು ಆದಾಯ ತೆರಿಗೆಯನ್ನು ಸೂಕ್ತ ರೀತಿಯಲ್ಲಿ ಪಾವತಿಸದಿರುವುದು ಕಂಡುಬಂದಿದೆ. ಸಾಗರೋತ್ತರ ಹಕ್ಕು, ಟಿವಿ ಹಕ್ಕು, ಡಿಜಿಟಲ್ ಹಕ್ಕು ಮತ್ತು ಆಡಿಯೋ ಹಕ್ಕು ಬಗ್ಗೆ ಸಮರ್ಪಕ ಲೆಕ್ಕ ತೋರಿಸಿಲ್ಲ. ನಟರಿಗಿಂತ ನಿರ್ವಪಕರು ಅಧಿಕ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಬಾಲಕೃಷ್ಣನ್ ವಿವರಿಸಿದರು.

ಇಡಿಗೆ ಪ್ರಕರಣ?: ಆದಾಯ ತೆರಿಗೆ ಕಾಯ್ದೆ 276ಸಿ (1) ಅಡಿಯಲ್ಲಿ 1 ಲಕ್ಷಕ್ಕೆ ಮೇಲ್ಪಟ್ಟು ತೆರಿಗೆ ವಂಚನೆ ನಡೆಸಿ ಐಟಿ ಕಾಯ್ದೆ ಉಲ್ಲಂಘಿಸಿರುವುದು ಕಂಡು ಬಂದರೆ ಕನಿಷ್ಠ 1 ವರ್ಷ ಮತ್ತು ಗರಿಷ್ಠ 7 ವರ್ಷ ಜೈಲು ಶಿಕ್ಷೆಯಾಗಲಿದೆ. ಅಕ್ರಮವಾಗಿ ಆಸ್ತಿ ಖರೀದಿಸಲು ಲೇವಾದೇವಿ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ ಐಟಿ ಅಧಿಕಾರಿಗಳು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಅಂತಹ ಪ್ರಕರಣವನ್ನು ಇಡಿ ತನಿಖೆ ನಡೆಸಲಿದೆ.

ಡಿ.ಕೆ. ಶಿವಕುಮಾರ್​ಗೆ ಬಂಧನ ಭೀತಿ

ಸಚಿವ ಡಿ.ಕೆ ಶಿವಕುಮಾರ್ ಕೋಟ್ಯಂತರ ರೂ. ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ದಾಖಲಾಗಿರುವ ದೂರಿನಲ್ಲಿರುವ ಆರೋಪಿಗಳಷ್ಟೆ ಅಲ್ಲದೆ, ಇತರ ಹಲವರ ಹೆಸರಲ್ಲಿ ಬೇನಾಮಿ ಆಸ್ತಿ ವಿವರ ಸಿಕ್ಕಿದೆ. ತನಿಖೆ ಅಂತಿಮ ಹಂತದಲ್ಲಿದೆ. ಈಗಾಗಲೆ 400 ಕೋಟಿ ರೂ. ಗೂ ಅಧಿಕ ಅಘೊಷಿತ ಆಸ್ತಿ ಪತ್ತೆಯಾಗಿದೆ. ಡಿಕೆಶಿ ವಿರುದ್ಧ ಈಗಾಗಲೇ ಜಾರಿ ನಿರ್ದೇಶನಾಲಯದಲ್ಲಿ ಎಫ್​ಐಆರ್ ದಾಖಲಾಗಿದೆ. ಬೇನಾಮಿ ಆಸ್ತಿ ಗಾತ್ರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯದಲ್ಲೆ ದೆಹಲಿಯಲ್ಲಿರುವ ಬೇನಾಮಿ ಆಸ್ತಿ ನಿಯಂತ್ರಣ ನ್ಯಾಯಮಂಡಳಿಗೆ ವರದಿ ಸಲ್ಲಿಸಲಾಗುವುದು. ಸರ್ಕಾರಕ್ಕೆ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ತಮ್ಮ ತಾಯಿಯ ಹೆಸರಲ್ಲಿ ಸಂಪಾದನೆ ಮಾಡಿರುವ ಆಸ್ತಿಗೆ ಸಂಬಂಧಿಸಿದಂತೆ ಡಿಕೆಶಿ ತಾಯಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆಗೆ ಹಾಜರಾದ ಮನೋಹರ್

ಐಟಿ ದಾಳಿಗೊಳಗಾದ ನಿರ್ವಪಕ ಸಿ.ಆರ್. ಮನೋಹರ್ ಸೋಮವಾರ ಆದಾಯ ತೆರಿಗೆ ಕಚೇರಿಗೆ ಹಾಜರಾಗಿದ್ದರು. ನಾನು ಯಾವುದೇ ತೆರಿಗೆ ಉಳಿಸಿಕೊಂಡಿಲ್ಲ. ನಾನು ಸಿನಿಮಾಗಳನ್ನು ವಿತರಣೆ ಮಾಡಿಲ್ಲ. ಎಲ್ಲದಕ್ಕೂ ಅಕೌಂಟ್ ಇದೆ. ಯಾವುದೇ ದಾಖಲೆ, ಹಣ ಮನೆಯಲ್ಲಿ ಸಿಕ್ಕಿಲ್ಲ ಎಂದು ಮನೋಹರ್ ತಿಳಿಸಿದ್ದಾರೆ.

6,134 ಅಘೋಷಿತ ಆಸ್ತಿ ಪತ್ತೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಘೋಷಿತವಾಗಿ ಪತ್ತೆಯಾಗಿರುವ 6,134 ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಮಹಾನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ತಿಳಿಸಿದ್ದಾರೆ. ಆದಾಯ ತೆರಿಗೆ ಕಚೇರಿಯಲ್ಲಿ ಸೋಮವಾರ ನಡೆದ ತನಿಖಾ ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸುವ ‘ಅನ್ವೇಷಣಾ’ ಕಾರ್ಯಕ್ರಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷ 2018ರ ನವೆಂಬರ್​ವರೆಗೆ 6,134 ಕೋಟಿ ರೂ. ಅಘೋಷಿತ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 4,038 ಕೋಟಿ ರೂ. ಅಕ್ರಮ ಆಸ್ತಿ ಎಂದು ದಾಳಿಗೊಳಗಾದವರು ಈಗಾಗಲೇ ಒಪ್ಪಿಕೊಂಡಿದ್ದಾರೆ. 120 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಉಳಿದ 2,096 ಕೋಟಿ ರೂ. ಅಕ್ರಮ ಆಸ್ತಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಾಫ್ಟ್​ವೇರ್, ಆಟೋ ಮೊಬೈಲ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ತೆರಿಗೆ ಸಂಗ್ರಹ ಮಾಡಲಾಗಿದೆ. ಉಳಿದಂತೆ ಬಹುತೇಕ ದಾಳಿಗಳು ರಾಜಕಾರಣಿಗಳು. ಟ್ರಸ್ಟ್​ಗಳು, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳ ಮೇಲೆ ನೆಡೆದಿವೆ. ದೇಶದಲ್ಲಿ ತೆರಿಗೆ ಸಂಗ್ರಹಿಸುವುದರಲ್ಲಿ ನಮ್ಮ ವಿಂಗ್ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಮೂರು ಹಂತದಲ್ಲಿ ತೆರಿಗೆ ವಂಚನೆ

ಚಿತ್ರಮಂದಿರಗಳಿಂದಾಗುವ ಸಂಗ್ರಹದ ಮೊತ್ತ ಸೇರಿ ಪ್ರತಿಯೊಂದಕ್ಕೂ ಲೆಕ್ಕ ನೀಡಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಆದರೆ, ಅದು ನಡೆಯುತ್ತಿಲ್ಲ. ಕಲಾವಿದರು, ನಿರ್ವಪಕರು,ರಾಜಕಾರಣಿಗಳು, ಉದ್ಯಮಿಗಳು ನಗದು ರೂಪದಲ್ಲಿ ವ್ಯವಹಾರ ನಡೆಸಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಧಾನ ನಿರ್ದೇಶಕ (ತನಿಖೆ) ಆರ್. ರವಿಚಂದ್ರ ಹೇಳಿದರು. ಸ್ಯಾಂಡಲ್​ವುಡ್​ನಲ್ಲಿ ಪ್ರಮುಖವಾಗಿ ಮೂರು ಹಂತದಲ್ಲಿ ತೆರಿಗೆ ವಂಚನೆ ನಡೆಯುತ್ತದೆ. ಸಂಭಾವನೆ, ಸ್ಯಾಟಲೈಟ್ ಹಕ್ಕುಗಳ ವಿತರಣೆ, ಚಿತ್ರಮಂದಿರಗಳಲ್ಲಿ ಸಂಗ್ರಹವಾಗುವ ಮೊತ್ತ ಪಡೆದುಕೊಳ್ಳುವುದರಲ್ಲಿ ತೆರಿಗೆ ವಂಚನೆ ನಡೆಯುತ್ತಿದೆ ಎಂದರು.

ಬೇನಾಮಿ ಆಸ್ತಿ?

ಡಿ. ಕೆ. ಶಿವಕುಮಾರ್ ವಿರುದ್ಧ ಈಗಾಗಲೇ ಐಟಿ ಕಾಯ್ದೆ ಸೆಕ್ಷನ್ 277, 276ಸಿ(1), 278, 120(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸರ್ಕಾರ 2016ರಲ್ಲಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದೆ. ಬೇನಾಮಿ ಆಸ್ತಿ ಹೊಂದಿದ್ದರೆ ಅಂತಹವರಿಗೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆಯಡಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಬೇನಾಮಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ ಪ್ರಸ್ತುತ ಆಸ್ತಿಗೆ ಇರುವ ಬೆಲೆಯ ಶೇ.10 ದಂಡ ವಿಧಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ತಮ್ಮ ಆಸ್ತಿಯ ಮೌಲ್ಯವನ್ನು ಬೇರೊಬ್ಬರು ಪಾವತಿ ಮಾಡಿದರೆ ಅಂತಹ ಆಸ್ತಿಯನ್ನು ಬೇನಾಮಿ ಆಸ್ತಿ ಎನ್ನಲಾಗುತ್ತದೆ. ಚರಾಸ್ತಿ, ಸ್ಥಿರಾಸ್ತಿ, ಬ್ಯಾಂಕ್ ಖಾತೆಗಳನ್ನು ಬೇನಾಮಿ ಎಂದು ಹೇಳಲು ಅವಕಾಶಗಳಿವೆ. ವಿಚಾರಣೆ ಸಂದರ್ಭದಲ್ಲಿ ಡಿಕೆಶಿ ಬೇನಾಮಿ ಆಸ್ತಿ ಬಗ್ಗೆ ಕೆಲ ಮಾಹಿತಿಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Stay connected

278,741FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...