ತರಬೇತಿ ಕಾರ್ಯಾಗಾರ ಮುಕ್ತಾಯ

ಮಂಡ್ಯ: ನಗರದ ವಿಬ್‌ಸೆಟಿಯಲ್ಲಿ ಜಿಪಂ ಮತ್ತು ವಿಜಯಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ ಆರು ದಿನದ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಕುರಿತ ತರಬೇತಿ ಕಾರ್ಯಾಗಾರ ಮುಕ್ತಾಯವಾಯಿತು.

ರೈತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ವಿಬ್‌ಸೆಟಿ ನಿರ್ದೇಶಕ ಎಚ್.ಎಂ.ರವಿ, ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಕರು ಗ್ರಾಹಕರಾಗಿ ಉಪಯೋಗಿಸಿ ನಂತರ ಅದರ ಪ್ರಯೋಜನವನ್ನು ಇತರರಿಗೆ ತಿಳಿಸಬೇಕು. ಆ ಮೂಲಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಉತ್ಪನ್ನಗಳು ಸ್ವಲ್ಪ ದುಬಾರಿಯಾಗಿದ್ದು, ಅದಕ್ಕಿಂತ ಕ್ಯಾನ್ಸರ್ ದುಬಾರಿ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಲಕ್ಷಾಂತರ ದುಡಿದು, ಕೋಟ್ಯಂತರ ಖರ್ಚು ಮಾಡುವ ಬದಲು ಸಾವಯವ ಉತ್ಪನ್ನ ಬಳಸುವಂತೆ ಜನರಿಗೆ ತಿಳಿಸಿಕೊಡಬೇಕು ಎಂದರು.

ವಿಬ್‌ಸೆಟಿ ಉಪನ್ಯಾಸಕಿ ಕೆ.ಪಿ.ಅರುಣಕುಮಾರಿ, ಮಂಡ್ಯ ತಾಲೂಕು ಗಾಣದ ಮಾಲೀಕರ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಇತರರಿದ್ದರ.