ಮತ್ತೆ 6 ರೈಲು ಪ್ರಯಾಣ ರದ್ದು

ಮಂಗಳೂರು:  ಸುಬ್ರಹ್ಮಣ್ಯ ರೋಡ್ ಮತ್ತು ಶಿರಿಬಾಗಿಲು ನಡುವೆ ಘಾಟಿ ಪ್ರದೇಶದಲ್ಲಿ ಹಾದುಹೋಗುವ ರೈಲುಗಳಿಗೆ ಕಂಟಕವಾಗಿರುವ ಬೆಟ್ಟದ ಮೇಲಿನ ಬಂಡೆ ತೆರವು ಕಾಮಗಾರಿ ಮತ್ತೆ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಆರು ರೈಲುಗಳ ಪ್ರಯಾಣ ರದ್ದುಗೊಳಿಸಿ ನೈಋತ್ಯ ರೈಲ್ವೆ ಪ್ರಕಟಣೆ ನೀಡಿದೆ.

ಜುಲೈ 23ರಂದು ಯಶವಂತಪುರ-ಮಂಗಳೂರು ಜಂಕ್ಷನ್‌ಎಕ್ಸ್‌ಪ್ರೆಸ್(ನಂ.16575), ಯಶವಂತಪುರ-ಮಂಗಳೂರು ಸೆಂಟ್ರಲ್(ನಂ. 16585), 24ರಂದು ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್‌ಪ್ರೆಸ್(ನಂ.16576), ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್(16515), ಮಂಗಳೂರು ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್(ನಂ.16586) ಮತ್ತು 25ರಂದು ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್(ನಂ.16516) ರೈಲುಗಳ ಸೇವೆ ಪೂರ್ಣ ರದ್ದುಪಡಿಸಲಾಗಿದೆ.

ಭಾಗಶಃ ರದ್ದು: ಘಾಟಿ ಪ್ರದೇಶದಲ್ಲಿ ಕಾಮಗಾರಿ ನಡೆಯುವ ಅವಧಿಯಲ್ಲಿ ಕಾರವಾರ ಮತ್ತು ಬೆಂಗಳೂರು/ಯಶವಂತಪುರ ನಡುವೆ ಪ್ರಯಾಣಿಸುವ ಕೆಲ ರೈಲುಗಳ ಮಂಗಳೂರು ಮತ್ತು ಕಾರವಾರ ನಡುವಿನ ಸಂಚಾರ ರದ್ದುಪಡಿಸಲಾಗಿದೆ.23ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್(ನಂ.16523) ರೈಲು, 24ರಂದು ಕಾರವಾರ- ಕೆಎಸ್‌ಆರ್ ಬೆಂಗಳೂರು ರೈಲು(ನಂ.16514), 24 ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ(ನಂ.16513)ಎಕ್ಸ್‌ಪ್ರೆಸ್ ಹಾಗೂ 25ರಂದು ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(ನಂ.16524) ಕಾರವಾರ ಮತ್ತು ಮಂಗಳೂರು ನಡುವೆ ಸಂಚರಿಸುವುದಿಲ್ಲ.

ಕೆಲ ರೈಲುಗಳ ಮಾರ್ಗ ಬದಲು
ಬೆಂಗಳೂರು-ಕಣ್ಣೂರು/ಕಾರವಾರ ನಡುವೆ ಸಂಚರಿಸುವ ಕೆಲ ರೈಲುಗಳು ಈ ಕಾಮಗಾರಿ ನಡೆಯುವ ಸಂದರ್ಭ ಶಿರಿಬಾಗಿಲು ಮಾರ್ಗ ಬದಲು ಕೇರಳ ಮಾರ್ಗ ಸಂಚರಿಸಲಿದೆ. 23ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‌ಪ್ರೆಸ್(ನಂ.16517/ 16523)ಮೈಸೂರು, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್ ಮಾರ್ಗ ಬದಲು ಜೋಳಾರಪೇಟೆ, ಸೇಲಂ, ಪಾಲ್ಘಾಟ್, ಶೊರ್ನೂರು ಮಾರ್ಗದಲ್ಲಿ ಸಂಚರಿಸಲಿದೆ. 23 ರಂದು ಕಣ್ಣೂರು/ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(ನಂ. 16512/ 16514) ಸಕಲೇಶಪುರ, ಶ್ರವಣಬೆಳಗೊಳ ಮಾರ್ಗ ಬದಲು ಶೊರ್ನೂರು, ಪಾಲ್ಘಾಟ್, ಸೇಲಂ, ಜೋಳಾರಪೇಟೆ ಮಾರ್ಗ ಸಂಚರಿಸಲಿದೆ. 24 ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು/ ಕಾರವಾರ ರೈಲು ಸುಬ್ರಹ್ಮಣ್ಯ ರೋಡ್, ಶ್ರವಣಬೆಳಗೊಳ ಮಾರ್ಗ ಬದಲು ಜೋಳಾರಪೇಟೆ, ಸೇಲಂ, ಪಾಲ್ಘಾಟ್, ಶೊರ್ನೂರು ಮಾರ್ಗ ಸಂಚರಿಸಲಿದೆ. ಜು.24 ರಂದು ಕಣ್ಣೂರು/ ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್(ನಂ. 16512/ 16514) ಶ್ರವಣಬೆಳೆಗೊಳ ಮಾರ್ಗ ಬದಲು ಶೊರ್ನೂರು, ಪಾಲ್ಘಾಟ್, ಸೇಲಂ, ಜೋಳಾರಪೇಟೆ ಮಾರ್ಗದಲ್ಲಿ ಸಂಚರಿಸಲಿದೆ.

ಕಾಮಗಾರಿ ಗುರುವಾರ ರಾತ್ರಿ ಪೂರ್ಣ ಸಾಧ್ಯತೆ
ಘಾಟಿ ಪ್ರದೇಶದಲ್ಲಿ ರೈಲು ಪ್ರಯಾಣಕ್ಕೆ ಅಡ್ಡಿಯಾಗುತ್ತಿರುವ ಬಂಡೆಕಲ್ಲು ತೆರವುಗೊಳಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಹಳಿ ಮೇಲೆ ಅಪಾರ ಪ್ರಮಾಣದಲ್ಲಿ ಬಿದ್ದಿರುವ ಮಣ್ಣು ಮತ್ತು ಕಲ್ಲಿನ ತುಂಡುಗಳನ್ನು ತೆಗೆಯುವ ಕೆಲಸ ನಡೆಯಬೇಕಾಗಿದೆ. ಬುಧವಾರ ಹಗಲು ಮತ್ತು ರಾತ್ರಿ ಮಳೆ ಸ್ವಲ್ಪ ದೂರವಾದರೆ ಗುರುವಾರ ಮುಂಜಾನೆ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬಹುದು. ಕಾಮಗಾರಿ ಬಳಿಕ ರೈಲ್ವೆ ಹಳಿ ಸಂಚಾರಕ್ಕೆ ಅನುಕೂಲಕರ ಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆದರೆ ಇನ್ನೂ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ಮುಗಿಯುವ ವೇಳೆಯನ್ನು ಮುಂಚಿತವಾಗಿಯೇ ಅಂದಾಜು ಮಾಡುವುದು ಅಸಾಧ್ಯ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾ

Leave a Reply

Your email address will not be published. Required fields are marked *