ಸಂಚಾರ ನಿಯಮ ಪಾಲಿಸಿ, ಅವಘಡ ತಪ್ಪಿಸಿ

ದಾವಣಗೆರೆ: ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಪ್ರಾದೇಶಿಕ ಸಾರಿಗೆ ಕಚೇರಿ ಅವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಚಾಲನೆ ನೀಡಿದರು.

ಜಿಲ್ಲೆಯಲ್ಲಿ 2016 ರಿಂದ 2018 ರ ಅವಧಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 824 ಜನ ಜೀವ ಕಳೆದುಕೊಂಡಿದ್ದಾರೆ. ಅಜಾಗರೂಕತೆ, ಸಾರಿಗೆ ನಿಯಮ ಉಲ್ಲಂಘನೆ ಅಪಘಾತಕ್ಕೆ ಕಾರಣ. 18 ವರ್ಷದೊಳಗಿನ, ಡಿಎಲ್ ಇಲ್ಲದವರಿಗೆ ವಾಹನ ಚಲಾವಣೆಗೆ ಅವಕಾಶ ನೀಡಬಾರದೆಂಬ ನಿಯಮವಿದ್ದರೂ ಉಲ್ಲಂಘನೆಯಾಗುತ್ತಿದೆ. ಪಾಲಕರು ಹಾಗೂ ವಾಹನ ಮಾಲೀಕರ ಅಸಡ್ಡೆಗೆ ಹಲವು ಜೀವ ಬಲಿಯಾಗುತ್ತಿವೆ ಎಂದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಲಕ್ಷ್ಮೀಕಾಂತ್ ಬಿ.ನಲವಾರ್ ಮಾತನಾಡಿ, ಅಪಘಾತಗಳ ಸಂಖ್ಯೆ ಕಡಿತಗೊಳಿಸಿ, ಪ್ರಯಾಣ ಸುರಕ್ಷಿತಗೊಳಿಸುವುದೇ ಸಪ್ತಾಹದ ಉದ್ದೇಶ. ಪ್ರತಿವರ್ಷ ಶೇ. 10 ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ಅಪಘಾತ ಮಾಡಿದ ಚಾಲಕರಿಗೆ ದಂಡ, 3 ರಿಂದ 6 ತಿಂಗಳವರೆಗೆ ಡಿಎಲ್ ರದ್ದುಪಡಿಸಲಾಗುವುದು ಎಂದು ತಿಳಿವಳಿಕೆ ನೀಡಿದರು.

ಹೆಚ್ಚಿನ ಮಾಹಿತಿಗೆ ವಿಜಯವಾಣಿ ಓದಿ