ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡಿದ್ದೀರಲ್ಲ ಎಂದು ಪೊಲೀಸರಿಗೆ ಯುವಕನ ಕ್ಲಾಸ್​: ಸಿಟ್ಟಿಗೆದ್ದು ಕೂಗಾಡಿದ ಪೊಲೀಸ್​

ಬೆಂಗಳೂರು: ರೂಲ್ಸ್ ಬಗ್ಗೆ ಟ್ರಾಫಿಕ್ ಪೊಲೀಸ್​ನನ್ನು ಪ್ರಶ್ನಿಸಿದ ಯುವಕನಿಗೆ ಆ ಪೊಲೀಸ್​ ಜೋರು ಧ್ವನಿಯಲ್ಲಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪೊಲೀಸ್​ ನಡೆಗೆ ಸಾರ್ವಜನಿಕರು ಟೀಕೆ ವ್ಯಕ್ತಪಡಿಸಿದ್ದಾರೆ.

ಬೈಕ್​ ಮೇಲೆ ಹೋಗುತ್ತಿದ್ದ ಯುವಕನನ್ನು ತಡೆದ ಟ್ರಾಫಿಕ್​ ಪೊಲೀಸ್​ ಆತನಿಂದ 300 ರೂಪಾಯಿ ದಂಡ ಕಟ್ಟಿಸಿದ್ದರು. ಆದರೆ, ಆ ಟ್ರಾಫಿಕ್​ ಪೊಲೀಸ್​ ಬೈಕ್​ನಲ್ಲಿ ಕೂಡ ನಂಬರ್ ಪ್ಲೇಟ್​ನಲ್ಲಿ ಅಂಕಿಗಳು ಸರಿಯಿಲ್ಲದೆ ಅಳಿಸಿ ನೋಡಿದ ಯುವಕ ಅದನ್ನು ಪ್ರಶ್ನಿಸಿದ. ಆದರೆ ಪೊಲೀಸ್​ ಉಡಾಫೆಯಲ್ಲಿ ಉತ್ತರಿಸಿದ್ದಾರೆ. ಅದೇನಾಗದೆ, ಸ್ವಲ್ಪ ಕಿತ್ತೋಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಯುವಕ ಸುಮ್ಮನಾಗದೆ ನಮ್ಮ ಬಳಿ ಫೈನ್​ ಕಟ್ಟಿಸಿಕೊಳ್ಳುತ್ತೀರಿ. ನೀವು ಕಾನೂನು ಉಲ್ಲಂಘನೆ ಮಾಡುತ್ತೀರೆಂದು ಹೇಳಿದ್ದಾನೆ. ಅಲ್ಲದೆ, ಇದನ್ನು ವಿಡಿಯೋ ಕೂಡ ಮಾಡಿದ್ದಾನೆ. ಅದನ್ನು ನೋಡಿದ ಪೊಲೀಸ್​ ಕೋಪಗೊಂಡು, ವಿಡಿಯೋ ಮಾಡುತ್ತೀಯಾ ಮಾಡು, ನಾನೂ ನೋಡುತ್ತೀನಿ. ನಮ್ಮ ಗಾಡಿ ನಂಬರ್​ ತಪ್ಪಾಗಿದ್ಯಾ, ಹಾಗಾದ್ರೆ ತಗೋಂಡು ಹೋಗು ಬಾ ಅಂತ ಜೋರು ಧ್ವನಿಯಲ್ಲಿ ಕೂಗಾಡಿದ್ದಾರೆ.
ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದ್ದು ಅಪಾರ ಟೀಕೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *