ನೃತ್ಯ ಮಾಡುತ್ತ ಸಂಚಾರ ನಿಯಂತ್ರಿಸುವ ಟ್ರಾಫಿಕ್​ ಪೊಲೀಸ್​!

ಭುವನೇಶ್ವರ್​: ಜನರಲ್ಲಿ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸಲು ಇಲ್ಲೊಬ್ಬರು ಟ್ರಾಫಿಕ್​ ಪೊಲೀಸ್​ ವಿಭಿನ್ನ ಪ್ರಯತ್ನ ನಡೆಸಿದ್ದಾರೆ. ಕರ್ತವ್ಯದಲ್ಲಿದ್ದಾಗ ನೃತ್ಯ ಮಾಡುವ ಮೂಲಕ ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಪಾಲಿಸಲು ತಿಳಿವಳಿಕೆ ಮೂಡಿಸುತ್ತಿದ್ದಾರೆ.
ಒಡಿಸ್ಸಾದ ಭುವನೇಶ್ವರ್​ನಲ್ಲಿ ಮೊದಲು ಹೋಮ್​ಗಾರ್ಡ್​ ಆಗಿದ್ದ ಪ್ರತಾಪ್​ ನಾಲ್ಕು ವರ್ಷಗಳ ಹಿಂದೆ ಟ್ರಾಫಿಕ್​ ಪೋಲಿಸ್​ ಆಗಿ ನಿಯೋಜಿತಗೊಂಡಿದ್ದಾರೆ.

ಆದರೆ, ನೃತ್ಯ ಮಾಡುತ್ತ ಕರ್ತವ್ಯ ನಿರ್ವಹಿಸಿ ಸಂಚಾರ ನಿಯಂತ್ರಣ ಮಾಡುವ ಮೂಲಕ ವಿಶಿಷ್ಟವೆನಿಸಿಕೊಂಡಿದ್ದಾರೆ.
ನಾನು ಸಂಚಾರಿ ನಿಯಮಗಳನ್ನು ನನ್ನ ನೃತ್ಯದ ಮೂಲಕ ಸವಾರರಿಗೆ ತಿಳಿಸುತ್ತೇನೆ. ಆರಂಭದಲ್ಲಿ ಯಾರೂ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ನನ್ನ ಸ್ಟೈಲ್ ನೋಡಿ ಜನರು ಆಕರ್ಷಿತರಾಗಿದ್ದು, ಈಗ ನಿಯಮಗಳನ್ನು ಅನುಸರಿಸುತ್ತಿದ್ದಾರೆ ಹೇಳಿಕೆ ನೀಡಿದ್ದಾರೆ.