ಈ ಮಾರ್ಗದಲ್ಲಿ ಸಂಚಾರ ಅಸಾಧ್ಯ!

ಶನಿವಾರಸಂತೆ: ಸಿದ್ದಾಪುರದಿಂದ ಕಂತೆಬಸವನಹಳ್ಳಿ ಉಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರ ಹೆದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ.

ಆಲೂರು-ಸಿದ್ದಾಪುರ ಬಾಲಕಿಯರ ಬಿಸಿಎಂ ವಸತಿ ನಿಲಯ ಸಮೀಪದಿಂದ ಸಿದ್ದಾಪುರ, ದೊಡ್ಡಕಣಗಾಲು ಗ್ರಾಮದ ಮೂಲಕವಾಗಿ ಕಂತೆಬಸವನಹಳ್ಳಿ-ಮಾಲಂಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಸ್ವತಂತ್ರ ಪೂರ್ವದಿಂದಲೂ ಗ್ರಾಮಸ್ಥರು ಇದೇ ಕಾಲು ರಸ್ತೆಯಲ್ಲೆ ಸಂಚರಿಸುತ್ತಿದ್ದು, ಈವರೆಗೂ ರಸ್ತೆ ಅಭಿವೃದ್ಧಿ ಕಂಡಿಲ್ಲ.

ಈ ಮಾರ್ಗದಲ್ಲಿ ಸುಮಾರು 35 ಮನೆಗಳಿದ್ದು, 150 ಜನಸಂಖ್ಯೆ ಇದೆ. ಮಳೆಗಾಲದಲ್ಲಿ ಇಲ್ಲಿ ಓಡಾಡಲು ಸಾಧ್ಯವೇ ಇಲ್ಲದಂತಹ ರಿಸ್ಥಿತಿ ಇಲ್ಲಿನದ್ದು. ಅಲ್ಲದೆ ಈ ಮಾರ್ಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕೆರೆಯಾಗಿ ಪರಿವರ್ತನೆಯಾಗುತ್ತದೆ. ಆಲೂರು-ಸಿದ್ದಾಪುರ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ಕಡೆಗೆ ತೆರಳುವವರು ಇದೇ ಮಾರ್ಗದಲ್ಲಿ ಹೋಗಬೇಕಾಗಿದೆ.
ಈ ಮಾರ್ಗವಾಗಿ ನಿತ್ಯ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಸುಮರು 4 ಕಿ.ಮೀ.ಹೆಚ್ಚುವರಿಯಾಗಿ ಬಳಸಿಕೊಂಡು ಹೋಗುವ ಅನಿವಾರ್ಯತೆ ಇದೆ.

ರಸ್ತೆ ಅಭಿವೃದ್ಧಿ ಪಡಿಸದಿದ್ದರೆ ಮತದಾನ ಬಹಿಸ್ಕರಿಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಆಗ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮಸ್ಥರ ಮನವೊಲಿಸುವಲ್ಲಿ ಯಶ್ವಿಯಾಗಿದ್ದರು. ಬಳಿಕ ಈ ರಸ್ತೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಬೋಡ್ರಸ್ ಕಲ್ಲುಮಣ್ಣು ಹಾಕಲಾಗಿತ್ತು. ನಂತರ ಈವರೆಗೂ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿಕ್ಕಪುಟ್ಟ ರಸ್ತೆಗೆ ಡಾಂಬರು ಹಾಕವುದರ ಜತೆಗೆ ಚರಂಡಿ ಮಾಡಲಾಗುತ್ತಿದೆ. ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು 8 ದಶಕಗಳಿಂದಲೂ ಅಭಿವೃದ್ಧಿ ಪಡಿಸಿಲ್ಲ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ತೆಯನ್ನು ಅಭಿವೃದ್ಧಿಪಡಿಸುವ ಸಂದರ್ಭ ರಸ್ತೆ ವಿಸ್ತರಣೆಯಾಗಬೇಕಾದರೆ ಅದಕ್ಕೆ ಸಹಕರಿಸಲು ಸಿದ್ಧ. ಆದರೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಂಬಂಧ ಪರಿಶೀಲನೆ ಮಾಡಿಲ್ಲ. ಪರಿಶೀಲನೆ ಮಾಡಿಲ್ಲ, ಇನ್ನಾದರೂ ನಮ್ಮೂರಿನ ರಸ್ತೆಯ ಸ್ಥಿತಿಯನ್ನು ಖುದ್ದಾಗಿ ಬಂದು ಪರಿಶೀಲಿಸಿ ಕ್ರಮ ವಹಿಸಲಿ.
ಎಸ್.ಎಸ್.ಸುರೇಶ್, ಸಿದ್ದಾಪುರ ನಿವಾಸಿ

ಸಿದ್ದಾಪುರ-ಕಂತೆಬಸವನಹಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯಿತಿಯಿಂದ ನೀಡಲಾಗುವ ಅನುದಾನ ಸಾಲುವುದಿಲ್ಲ. ಆಲೂರು-ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆಗಳನ್ನು ಡಾಂಬರಿಕರಣಗೊಳಿಸುವ ಉದ್ದೇಶದಿಂದ ಪಟ್ಟಿಯನ್ನು ತಯಾರಿಸಲಾಗಿದೆ. ಈ ರಸ್ತೆಯನ್ನು ಪಟ್ಟಿಗೆ ಸೇರಿಸುವಂತೆ ಸಂಸದರು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ.
ಸರೋಜಮ್ಮ, ಜಿ.ಪಂ. ಸದಸ್ಯೆ, ಗೋಪಾಲಪುರ ಕ್ಷೇತ್ರ

 

Leave a Reply

Your email address will not be published. Required fields are marked *