ಲಿಂಗಸುಗೂರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಅಡ್ಡಾದಿಡ್ಡಿ ವಾಹನ ನಿಲ್ಲಸಿದ್ದ ವಾಹನ ಸವಾರರಿಗೆ ಪಿಐ ಪುಂಡಲೀಕ ಪಟಾತಾರ್ ಶುಕ್ರವಾರ ದಂಡ ವಿಧಿಸಿದರು.
ರಸ್ತೆ ಬದಿ ವ್ಯಾಪಾರಿಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ವ್ಯಾಪಾರಿಗಳಿಂದ ಕೆಲವರು 100 ರೂ.ಯಿಂದ 500 ರೂ.ವರೆಗೆ ವಸೂಲಿ ಮಾಡುತ್ತಿರುವ ದೂರುಗಳ ಕುರಿತು ಮತ್ತು ಪುರಸಭೆ ಆಡಳಿತ ವೈಫಲ್ಯದ ಬಗ್ಗೆ ಇತ್ತೀಚಿಗೆ ಪುರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಐ ಪುಂಡಲೀಕ ಪಟಾತಾರ್ ರಸ್ತೆ ಬದಿ ತಳ್ಳುಬಂಡಿ ಹಾಗೂ ವಾಹನಗಳನ್ನು ತೆರವುಗೊಳಿಸುವುದರೊಂದಿಗೆ ದಂಡ ವಿಧಿಸಿ ಸಂಚಾರಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದರು.