ಶಾಲೆ ಆವರಣದ ಬಳಿ ಸಲಗ ಸಂಚಾರ

blank

 ಬೇಲೂರು: ಭೀಮ ಹೆಸರಿನ ಕಾಡಾನೆ ತಾಲೂಕಿನ ಬಿಕ್ಕೋಡು ಸಮೀಪದ ಕೋಡಿಮಠದ ಮಠ ಸಮೀಪದ ಶಾಲೆ ಆವರಣಕ್ಕೆ ಮಂಗಳವಾರ ಆಗಮಿಸಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಆದರೆ ಭೀಮ ತನ್ನ ಪಾಡಿಗೆ ತಾನು ಮುಂದೆ ಸಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

ತಾಲೂಕಿನ ಬಿಕ್ಕೋಡು-ಅರೇಹಳ್ಳಿ ಹೋಬಳಿಯಲ್ಲಿ ಈಗಾಗಲೇ ಕಾಡಾನೆಗಳು ಬೀಡುಬಿಟ್ಟು ಉಪಟಳ ನೀಡುತ್ತಿರುವ ಘಟನೆಗಳನ್ನು ನೋಡಿ ಸಾಕಾಗಿದ್ದ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಕೆಲ ದಿನಗಳಿಂದ ಅಲ್ಲೊಂದು ಇಲ್ಲೊಂದು ಕಾಡಾನೆ ಕಾಣಿಸಿಕೊಂಡಿದ್ದಲ್ಲದೆ, ಗುಂಪಿನಲ್ಲಿದ್ದ ಕಾಡಾನೆಗಳು ಬೇರೆಡೆಗೆ ತೆರಳಿದ್ದರಿಂದ ಕೆಲ ದಿನ ನಿಟ್ಟುಸಿರುಬಿಟ್ಟಿದ್ದರು.
ಸದ್ಯ ಭುವನೇಶ್ವರಿ ಹಿಂಡಿನ 25 ಕಾಡಾನೆಗಳ ಹಿಂಡು ಜಗಬೋರನಹಳ್ಳಿ ಅರಣ್ಯದಲ್ಲಿ ಬೀಡುಬಿಟ್ಟಿವೆ. ಅಲ್ಲದೆ ಆಲೂರು-ಸಕಲೇಶಪುರ ಗಡಿ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತಿದ್ದ ಭೀಮ ಹೆಸರಿನ ಬೃಹತ್ ಗಾತ್ರದ ಮದ ಬಂದಿರುವ ಒಂಟಿ ಸಲಗ ಮಂಗಳವಾರ ಬಿಕ್ಕೋಡು ಸಮೀಪದ ಹಾರನಹಳ್ಳಿ ಶಾಖೆಯ ಕೋಡಿಮಠ ಶಾಲೆ ಆವರಣದಲ್ಲಿ ಮಧ್ಯಾಹ್ನದ ಸಮಯದಲ್ಲೇ ರಾಜ ಗಾಂಭೀರ್ಯದಿಂದ ಜಗಬೋರನಹಳ್ಳಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನತ್ತ ಸಾಗಿತು.
ಇದಕ್ಕೂ ಮುನ್ನ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆನೆ ಕಾರ್ಯಪಡೆ ಸಿಬ್ಬಂದಿ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿ ಕೊಳ್ಳುತ್ತಲೇ ಇದ್ದರು. ಜತೆಗೆ ಬಿಕ್ಕೋಡಿನಲ್ಲಿ ಪ್ರತಿ ವಾರದಂತೆ ಮಂಗಳವಾರ ವಾರದ ಸಂತೆ ನಡೆಯುವುದರಿಂದ ಸಂತೆ ಸಮೀಪದ ಅನತಿ ದೂರದಲ್ಲೆ ಒಂಟಿ ಸಲಗದ ಸಂಚಾರದ ಬಗ್ಗೆ ಸುದ್ದಿ ತಿಳಿದ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು, ಸಮೀಪದ ನಿವಾಸಿಗಳು ಆತಂಕದಿಂದಲೇ ಸಂತೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿ ಬೇಗ ಮನೆಗಳಿಗೆ ತೆರಳಿದರೆ, ಮತ್ತೆ ಕೆಲವರು ಕಡಾನೆ ನೋಡಲು ತೆರಳಿದರು. ಇದರಿಂದ ಕೋಡಿ ಮಠದ ಸಮೀಪ ಜನ ಜಂಗುಳಿ, ವಾಹನ ದಟ್ಟಣೆ ಉಂಟಾಗಿತು.

 

ದೈತ್ಯ ಭೀಮ ಆನೆಯ ಗಂಭೀರ ನಡಿಗೆಯನ್ನು ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆ ಹಿಡಿದು ಸಂತಸ ಪಟ್ಟರು. ಆದರೆ ಶಾಲೆಗೆ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ ಕಟ್ಟಡದ ಮೇಲ್ಭಾಗಕ್ಕೆ ತೆರಳಿ ದೈತ್ಯ ಗಾತ್ರದ ಭೀಮನನ್ನು ವೀಕ್ಷಿಸಿದರು.

 

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…