ದೀವಳ್ಳಿ- ಅಟ್ಲಗುಂಡಿ ಸೇತುವೆ ಮೇಲೆ ಸಂಚಾರ ನಿಷೇಧ, ದುರಸ್ತಿಗಾಗಿ ಸಾರ್ವಜನಿಕರ ಪ್ರತಿಭಟನೆ


ಕುಮಟಾ: ಮಳೆಯಿಂದ ಹಾನಿಗೊಳಗಾಗಿರುವ ತಾಲೂಕಿನ ಸಂತೇಗುಳಿ ಸನಿಹದ ದೀವಳ್ಳಿ- ಅಟ್ಲಗುಂಡಿ ಸೇತುವೆ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಸಾರಿಗೆ ಬಸ್ ಓಡಾಟ ಬಂದ್ ಆಗಿರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವನಿಕರಿಗೆ ಸಮಸ್ಯೆಯಾಗಿದೆ. ಕೂಡಲೇ ಸೇತುವೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುತ್ತಮುತ್ತಲ ಪಂಚಾಯಿತಿಗಳ ಸಾರ್ವಜನಿಕರು ಗುರುವಾರ ದೀವಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಸೇತುವೆಯ ಒಂದು ಪಕ್ಕದಲ್ಲಿ ಮಾತ್ರ ಕಂಬದ ಕಲ್ಲುಗಳು ಕುಸಿದಿದ್ದರಿಂದ ಅಲ್ಲಿ ತಾತ್ಕಾಲಿಕವಾಗಿ ಬಲವಾದ ಕಬ್ಬಿಣದ ಚೌಕಟ್ಟುಗಳನ್ನು ಹಾಕಿ ಪಿಡಬ್ಲು್ಯಡಿಯವರು ಆಧಾರ ನೀಡಿದ್ದಾರೆ. ಹೀಗಾಗಿ ಈ ಸೇತುವೆಯ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಸಾರಿಗೆ ಬಸ್ ಸಂಚಾರವೂ ಐದು ದಿನದಿಂದ ಬಂದ್ ಆಗಿರುವುದು ತೀವ್ರ ಸಮಸ್ಯೆ ಸೃಷ್ಟಿಸಿದೆ.
ಸಂತೆಗುಳಿ, ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಿಂದ ನೂರಾರು ಮಂದಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕುಮಟಾಕ್ಕೆ ಬರಲಾಗದೇ ಪರದಾಡುವಂತಾಗಿದೆ. ಹಾಗೆಯೇ ಚಂದಾವರ, ಹೊಸಾಡು, ಹಟ್ಟಿಕೇರಿ, ಮರಾಕಲ್, ಸಾಂತಗಲ್ ಇನ್ನಿತರ ಪ್ರದೇಶಗಳಿಂದ ಸಂತೆಗುಳಿಯಲ್ಲಿರುವ ಕೆಪಿಎಸ್ ಹಾಗೂ ಇತರ ಶಾಲೆಗಳಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಸಾರಿಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಂತೆಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಭಟ್ ಮಾತನಾಡಿ, ಸಂತೆಗುಳಿ ಹಾಗೂ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳ ಜನರ ಅನುಕೂಲಕ್ಕಾಗಿ ಸೇತುವೆಯ ದುರಸ್ತಿ ಮತ್ತು ಬಸ್ ಸಂಚಾರ ಅನಿವಾರ್ಯವಿದೆ ಎಂದು ವಿವರಿಸಿದರು.
ಸುಮಾರು ಅರ್ಧ ಗಂಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು. ಈ ವೇಳೆ ತಹಸೀಲ್ದಾರ್ ಸತೀಶ ಗೌಡ, ಪಿಡಬ್ಲು್ಯಡಿ ಎಇಇ ಎಂ.ಪಿ. ನಾಯ್ಕ, ಸೋಮನಾಥ ಭಂಡಾರಿ ಮನವಿ ಸ್ವೀಕರಿಸಿದರು. ಸಂಬಂಧಪಟ್ಟ ತಜ್ಞರು ಬಂದು ಸೇತುವೆಯನ್ನು ಪರಿಶೀಲಿಸಿದ ಬಳಿಕ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂತೆಗುಳಿ ಪಂಚಾಯಿತಿ ಅಧ್ಯಕ್ಷ ಮಹೇಶ ನಾಯ್ಕ, ಸದಸ್ಯರಾದ ಜಮಾಲ ಸಾಬ, ಇಬ್ರಾಹಿಂ ಸಾಬ, ಸೊಪ್ಪಿನಹೊಸಳ್ಳಿ ಪಂಚಾಯಿತಿ ಅಧ್ಯಕ್ಷೆ ಶೈಲಾ ಗಜಾನನ ನಾಯ್ಕ, ಸದಸ್ಯರಾದ ಭಾರತಿ ಮುಕ್ರಿ, ಈಶ್ವರ ಮರಾಠಿ, ಅಬ್ದುಲ್ ಖಾದಿರಸಾಬ, ನಿವೃತ್ತ ಸೈನಿಕ ಗಜಾನನ ನಾಯ್ಕ, ಗಜಾನನ ನಾಯ್ಕ ಬಾಸೊಳ್ಳಿ, ನಾಗರಾಜ ನಾಯ್ಕ ಸಂತೆಗುಳಿ, ಶಂಕರ ಗೌಡ ಕಂದವಳ್ಳಿ ಇನ್ನಿತರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…