ಟ್ರ್ಯಾಕ್ಟರ್​ ಟ್ರೇಲರ್​ ಇಬ್ಬರು ಕಳ್ಳರನ್ನು ಬಂಧಿಸಿದ ಹರಿಹರ ಗ್ರಾಮಾಂತರ ಪೊಲೀಸರು, 6 ಟ್ರೇಲರ್​ಗಳ ವಶ

ದಾವಣಗೆರೆ: ದಾವಣಗೆರೆ ಜಿಲ್ಲೆಯ ವಿವಿಧೆಡೆಗಳಲ್ಲಿ ಟ್ರ್ಯಾಕ್ಟರ್​ ಟ್ರೇಲರ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿಕಾರಿಪುರ ತಾಲೂಕಿನ ಹರಗವಳ್ಳಿಯ ಬಸವರಾಜ್​ (30) ಮತ್ತು ರವಿಕುಮಾರ್​ (34) ಬಂಧಿತರು. ಬಂಧಿತರಿಂದ ಅಂದಾಜು 15 ಲಕ್ಷ ರೂ. ಮೌಲ್ಯದ 6 ಟ್ರೇಲರ್​ ಮತ್ತು ಒಂದು ಟ್ರ್ಯಾಕ್ಟರ್​ ಅನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಾವಣಗೆರೆ ಅಲ್ಲದೆ ಹರಿಹರ, ಮಲೇಬೆನ್ನೂರು, ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳ ಗದ್ದೆಗಳಲ್ಲಿ, ಕಣಗಳಲ್ಲಿ ನಿಲ್ಲಿಸಿರುತ್ತಿದ್ದ ಟ್ರ್ಯಾಕ್ಟರ್​ ಟ್ರೇಲರ್​ಗಳನ್ನು ಬಸವರಾಜ್​ ಮತ್ತು ರವಿಕುಮಾರ್​ ಕದಿಯುತ್ತಿದ್ದರು. ಕದ್ದ ಟ್ರೇಲರ್​ಗಳನ್ನು ಬೇರೆ ತಾಲೂಕುಗಳ ರೈತರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಹಣ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)