More

  ಪಿಎಲ್​ಡಿ ಬ್ಯಾಂಕ್​ ಗೇಟ್​ ಬೀಗ ಮುರಿದು ಜಪ್ತಿ ಮಾಡಿದ ಟ್ರ್ಯಾಕ್ಟರ್​ ತೆಗೆದುಕೊಂಡು ಹೋದ ರೈತರು

  ತುಮಕೂರು: ಬ್ಯಾಂಕ್​ ಗೇಟ್​ ಮುರಿದು ಜಪ್ತಿ ಮಾಡಿದ್ದ ಟ್ರ್ಯಾಕ್ಟರ್​ಗಳನ್ನು ರೈತರು ತೆಗೆದುಕೊಂಡು ತೆರಳಿದ ಘಟನೆ ನಗರದಲ್ಲಿ ನಡೆದಿದೆ.

  ಸಾಲ ಮರುಪಾತಿಯಾಗದ ಟ್ರ್ಯಾಕ್ಟರ್​ಗಳನ್ನು ಪಿಎಲ್​ಡಿ ಬ್ಯಾಂಕ್​ ಸಿಬ್ಬಂದಿ ಜಪ್ತಿ ಮಾಡಿ ಬ್ಯಾಂಕ್​ ಆವರಣದಲ್ಲಿ ನಿಲ್ಲಿಸಿದ್ದರು.
  ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ಜಮಾಯಿಸಿದ ರೈತರು ಪಿಎಲ್​ಡಿ ಬ್ಯಾಂಕ್​ ಗೇಟ್​ ಬೀಗ ಮುರಿದು ಟ್ರಾಕ್ಟರ್​ಗಳನ್ನು ಚಲಾಯಿಸಿಕೊಂಡು ತೆರಳಿದರು.

  ಬ್ಯಾಂಕ್​ ಸಿಬ್ಬಂದಿ ನೋಟಿಸ್​ ನೀಡದೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಎಂದು ರೈತರು ವಿರೋಧಿಸಿದರು.
  ಚಿಕ್ಕನಾಯಕನಹಳ್ಳಿ ತಾಲೂಕಿನ ರಂಗನಾಥ್‌ ಸೇರಿದಂತೆ ನಾಲ್ವರು ರೈತರ ಟ್ರ್ಯಾಕ್ಟರ್​ಗಳನ್ನು ಜಪ್ತಿ ಮಾಡಲಾಗಿತ್ತು. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts