ಬೈಕ್​ಗೆ ಟ್ರ್ಯಾಕ್ಟರ್​ ಡಿಕ್ಕಿ: ತಾಯಿ-ಮಗ ಸಾವು, ಮಕ್ಕಳಿಬ್ಬರು ಪಾರು

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಮೀನಕೆರೆ ಬಳಿ ಬೈಕ್​ಗೆ ಟ್ರ್ಯಾಕ್ಟರ್​ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ-ಮಗ ಮೃತಪಟ್ಟಿದ್ದಾರೆ.

ಮಾಡ್ಲಾಕನಹಳ್ಳಿಯ ನಿವಾಸಿ ಮಂಜುನಾಥ (29), ಹನುಮಕ್ಕ (49) ಮೃತರು.

ಬೈಕನಲ್ಲಿ ಹನುಮಕ್ಕರೊಂದಿಗೆ ಕುಳಿತಿದ್ದ ಇಬ್ಬರು ಮೊಮ್ಮಕ್ಕಳು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಗಾಯಗೊಂಡಿದ್ದ ಮಂಜುನಾಥ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)