ಘಟಪ್ರಭಾ: ಹುಕ್ಕೇರಿ ತಾಲೂಕಿನ ಜಿ.ಜಿ.ನಿಸರ್ಗೋಪಚಾರ ಆಸ್ಪತ್ರೆಯ ಬಳಿ ಭಾನುವಾರ ರಾತ್ರಿ 7.30ರ ಸುಮಾರು ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ.
ಕೊಟಬಾಗಿ ಗ್ರಾಮದ ಬಸವಣ್ಣಿ ಮೇತ್ರಿ(40) ಹಾಗೂ ಝಂಗಟಿಹಾಳ ದಾಸರತೋಟದ ನಿವಾಸಿ ಕೆಂಪಣ್ಣ ಪಾಟೀಲ(40) ಮೃತ ದುರ್ದೈವಿಗಳು. ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
