ಟ್ರ್ಯಾಕ್ಟರ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವನ ಸಾವು

ಸವದತ್ತಿ: ಸವದತ್ತಿ ಕರೀಕಟ್ಟಿ ರಸ್ತೆ ಮಧ್ಯೆ ಮಂಗಳವಾರ ಟ್ರ್ಯಾಕ್ಟರ್ ಉರುಳಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಟ್ಟಣದ ಅಕ್ಕಿ ಓಣಿಯ ಅಶೋಕ ಚಿನ್ನಪ್ಪ ಚಿಲಕವಾಡ ಹನಸಿ (57) ಮೃತಪಟ್ಟವ. ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಬರುತ್ತಿರುವಾಗ ದುರ್ಘಟನೆ ಸಂಭವಿಸಿದೆ.

ಮೃತನಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಸಹೋದರ ಇದ್ದಾರೆ. ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.