24.7 C
Bangalore
Sunday, December 15, 2019

ಪುರಭವನಕ್ಕಿಟ್ಟ ರಂಗರಾವ್ ಹೆಸರು ಮರೆತು ಹೋಯಿತೆ?

Latest News

ಈರುಳ್ಳಿ ಬೆಲೆ ಏರಿಕೆಯನ್ನೇ ಬಂಡವಾಳ ಮಾಡಿಕೊಂಡು ತನ್ನ ವ್ಯಾಪಾರ ಬಲಪಡಿಸಿಕೊಳ್ಳುತ್ತಿರುವ ಬಟ್ಟೆ ಅಂಗಡಿ ಮಾಲೀಕ

ಮುಂಬೈ: ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು ಸಾಮಾನ್ಯಜನರಿಗೆ ಹೊರೆಯಾಗುತ್ತಿದೆ. ಅದನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ.ಹೀಗಿರುವಾಗ ಇದೇ ಈರುಳ್ಳಿಯನ್ನು ಇಲ್ಲೋರ್ವ ಬಟ್ಟೆ ವ್ಯಾಪಾರಿ ತನ್ನ ಉದ್ಯಮವನ್ನು...

ನೀರಿನ ಹೊಂಡಕ್ಕೆ ಬಿದ್ದ ಯುವತಿ ರಕ್ಷಣೆ ವಿಡಿಯೋ ವೈರಲ್

ವಿಜಯವಾಣಿ ಸುದ್ದಿಜಾಲ ರಾಯಚೂರು ಖಾಸಗಿ ನಿವೇಶನ ನಿರ್ಮಾಣಕ್ಕಾಗಿ ತೆಗೆದ ಗುಂಡಿಯಲ್ಲಿ ಆಯತಪ್ಪಿ ಬಿದ್ದಿದ್ದ ಬಾಲಕಿ ಯನ್ನು ಯುವಕನೊಬ್ಬ ರಕ್ಷಣೆ ಮಾಡಿದ ವಿಡಿ ಯೋ ಸಾಮಾಜಿಕ...

ವಿಶ್ವಸುಂದರಿ ವಿಜೇತೆಗೆ ಕೊನೆಯ ಪ್ರಶ್ನೋತ್ತರ ಸುತ್ತಿನಲ್ಲಿ ಕೇಳಿದ ಪ್ರಶ್ನೆಗಾಳವುವು? ಜಮೈಕಾ ಬ್ಯೂಟಿಯ ಉತ್ತರ ಹೇಗಿತ್ತು?

ಲಂಡನ್​: 2019ನೇ ಸಾಲಿನ ವಿಶ್ವಸುಂದರಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗುವ ಮೂಲಕ ಜಮೈಕಾದ ಟೋನಿ ಅನ್​ ಸಿಂಗ್​ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸ್ಪರ್ಧೆಯ ಕೊನೆಯ ಪ್ರಶ್ನೋತ್ತರ...

ಶಿವಸೇನೆ ಕೈಯಲ್ಲಿರುವ ಗೃಹ ಇಲಾಖೆ ಮೇಲೆ ಎನ್​ಸಿಪಿ ಕಣ್ಣು; ಅಜಿತ್​ ಪವಾರ್​ಗೆ ಜವಾಬ್ದಾರಿ ವಹಿಸುವ ಪ್ರಯತ್ನ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ನೇತೃತ್ವದ ಸರ್ಕಾರ ರಚನೆಯಾಗಿದ್ದರೂ ಇನ್ನು ಸಚಿವ ಸಂಪುಟ ರಚನೆಯಾಗಿಲ್ಲ. ಸದ್ಯ ಯಾವ ಪಕ್ಷಗಳಿಗೆ ಯಾವ ಖಾತೆ ಎಂಬುದನ್ನು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ...

ಸ್ಮಾರಕದ ಮೇಲೆ ಕುಳಿತ ಪಾರಿವಾಳದಲ್ಲಿ ನೆಚ್ಚಿನ ನಟ ದಿ.ಅಂಬರೀಶ್​ ಅವರನ್ನು ಕಂಡ ಅಭಿಮಾನಿಗಳು

ಮಂಡ್ಯ: ರೆಬಲ್​ಸ್ಟಾರ್​ ದಿ.ಅಂಬರೀಶ್​ ಅವರ ಸ್ಮಾರಕವನ್ನು ಯಲಿಯೂರು ಗ್ರಾಮದಲ್ಲಿ ಪುತ್ರ ಅಭಿಷೇಕ್​ ಅಂಬರೀಶ್​ ಲೋಕಾರ್ಪಣೆ ಮಾಡಿದರು. ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಅಭಿಮಾನಿಗಳು ದಿ....

< ಪಾಲಿಕೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲೇ ಹೆಸರಿಲ್ಲ* ಪುರಭವನದಲ್ಲೂ ಸಣ್ಣ ಫಲಕ ಹೊರತುಪಡಿಸಿ ಬೇರೇನಿಲ್ಲ> 

ಭರತ್ ಶೆಟ್ಟಿಗಾರ್ ಮಂಗಳೂರು

2018ರ ಆಗಸ್ಟ್ 29ರಂದು ಮಂಗಳೂರು ಪುರಭವನಕ್ಕೆ ಮಹಾನಗರ ಪಾಲಿಕೆ ವತಿಯಿಂದ ‘ಕುದ್ಮುಲ್ ರಂಗರಾವ್ ಪುರಭವನ’ ಎಂದು ನಾಮಕರಣ ಮಾಡಲಾಗಿದೆ. ಅದರೆ ಪ್ರಸ್ತುತ ಇದು ಪಾಲಿಕೆಗೇ ಮರೆತು ಹೋದಂತಿದೆ.

ಪುರಭವನಕ್ಕೆ ನಾಮಕರಣ ಮಾಡಿದ ಬಳಿಕ ಸರ್ಕಾರಿ ಕಾರ್ಯಕ್ರಮವೂ ಸೇರಿದಂತೆ ನೂರಾರು ಕಾರ್ಯಕ್ರಮಗಳು ಅಯೋಜಿಸಲ್ಪಟ್ಟಿವೆ. ಇವುಗಳ ಪೈಕಿ ಶೇ.90ರಷ್ಟು ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಲ್ಲಿ ಮಂಗಳೂರು ಪುರಭವನ ಎಂದೇ ಮುದ್ರಿಸಲಾಗಿದೆ.

ಪಾಲಿಕೆ ಕಾರ್ಯಕ್ರಮವೊಂದು ಇದಕ್ಕೆ ಹೊಸದಾಗಿ ಸೇರ್ಪಡೆಗೊಂಡಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಾ.9ರಿಂದ 15ರವರೆಗೆ ಪುರಭವನದಲ್ಲಿ ತುಳು ನಾಟಕ ಪರ್ಬ ಆಯೋಜಿಸಲಾಗಿದೆ. ಆದರೆ ಈ ಆಹ್ವಾನ ಪತ್ರಿಕೆಯಲ್ಲಿ ಕುದ್ಮುಲ್ ರಂಗರಾವ್ ಹೆಸರಿಲ್ಲ, ಬದಲಾಗಿ ಸ್ಥಳ ಪುರಭವನ ಮಂಗಳೂರು ಎಂದಿದೆ. ತುಳು ಅಕಾಡೆಮಿ ಈ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ಕಣ್ತಪ್ಪಿನಿಂದ ಈ ತಪ್ಪು ಸಂಭವಿಸಿದೆಯಂತೆ. ಇದೊಂದು ಉದಾಹರಣೆಯಷ್ಟೇ, ಹಲವು ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಇದೇ ರೀತಿ ಮುದ್ರಣವಾಗಿದೆ.

ಪುರಭವನದಲ್ಲಿ ಸಣ್ಣ ಫಲಕ: ಪುರಭವನಕ್ಕೆ ದಲಿತೋದ್ಧಾರಕ ಕುದ್ಮುಲ್ ರಂಗರಾವ್ ಹೆಸರು ನಾಮಕರಣ ಮಾಡುವ ಬಗ್ಗೆ ಮನಪಾ 2016ರ ಜುಲೈ 29ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತು. ನಾಮಕರಣ ಪ್ರಕ್ರಿಯೆಗೆ ಸಂಬಂಧಿಸಿ ವಿಳಂಬ ನೀತಿ ಅನುಸರಿಸಿದ ಮನಪಾ ಎರಡು ವರ್ಷದ ಬಳಿಕ ಪುರಭವನಕ್ಕೆ ‘ಕುದ್ಮುಲ್ ರಂಗರಾವ್’ ಅವರ ಹೆಸರಿಟ್ಟಿತು. ಅದರಂತೆ ಪುರಭವನದ ಒಳಭಾಗದಲ್ಲಿ ಸಣ್ಣ ಫಲಕ ಅಳವಡಿಸಿದೆ. ನಗರಕ್ಕೆ ಹೊಸದಾಗಿ ಬರುವವರಿಗೆ, ಹೊರಗಿನಿಂದ ನೋಡುವವರಿಗೆ ಮಂಗಳೂರು ಪುರಭವನ ಎಂದಷ್ಟೇ ಕಾಣತ್ತದೆ. ಹೊರಭಾಗದಲ್ಲಿ ಕುದ್ಮುಲ್ ರಂಗರಾವ್ ಹೆಸರೇ ಇಲ್ಲ.

ಆಯೋಜಕರಿಗೆ ಬೇಕಿದೆ ಸೂಚನೆ: ಖಾಸಗಿಯಾಗಿ ಕಾರ್ಯಕ್ರಮ ಆಯೋಜಿಸುವವರು ಮಂಗಳೂರು ಪುರಭವನ ಎಂದೇ ಬಳಸುತ್ತಾರೆ. ಒಂದೆಡೆ ಅಂಬೇಡ್ಕರ್ ವೃತ್ತ ಎಂದು ಹೆಸರಿಡಲಾಗಿದ್ದರೂ ಜ್ಯೋತಿ ವೃತ್ತ ಎಂದೇ ಇನ್ನೂ ಬಳಕೆಯಾಗುತ್ತಿದೆ. ಪುರಭವನ ಕೂಡ ಅದೇ ಸಾಲಿಗೆ ಸೇರುವ ಸಾಧ್ಯತೆಯಿದೆ. ಆದ್ದರಿಂದ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗಲೇ ಕುದ್ಮುಲ್ ರಂಗರಾವ್ ಹೆಸರು ಬಳಸುವಂತೆ ಸೂಚಿಸಬೇಕಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಮೇಯರ್ ಭಾಸ್ಕರ ಕೆ. ವಿಜಯವಾಣಿಗೆ ತಿಳಿಸಿದ್ದಾರೆ.

ತುಳು ನಾಟಕ ಪರ್ಬದ ಆಮಂತ್ರಣ ಪತ್ರಿಕೆ ತುಳು ಅಕಾಡೆಮಿಯಿಂದ ಮುದ್ರಿಸಲಾಗಿದೆ. ಕಣ್ತಪ್ಪಿನಿಂದ ಪುರಭವನದ ಸಂಪೂರ್ಣ ಹೆಸರು ಮುದ್ರಣವಾಗಿಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ.
ಚಂದ್ರಹಾಸ ರೈ ಬಿ. ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್

ತುಳು ನಾಟಕ ಪರ್ಬದ ಆಮಂತ್ರಣ ಪತ್ರಿಕೆಯಲ್ಲಿ ಪುರಭವನದ ಹೆಸರನ್ನು ‘ಕುದ್ಮುಲ್ ರಂಗರಾವ್ ಪುರಭವನ’ ಎಂದು ಸರಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗಲೇ ಪುರಭವನದ ಪೂರ್ತಿ ಹೆಸರನ್ನು ಬರೆಯುವಂತೆ ಸೂಚಿಸಲಾಗುವುದು.
ಭಾಸ್ಕರ ಕೆ. ಮೇಯರ್

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...