More

  ಮೋದಿ ದೂರದೃಷ್ಟಿಯಿಂದ ದೇಶ ಪ್ರಗತಿಯತ್ತ

  ಗುಳೇದಗುಡ್ಡ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಗ್ಯಾರಂಟಿಯಿಂದಾಗಿ ನವ ಭಾರತ ಸಂಕಲ್ಪದ ಗುರಿ ಸಾಧನೆ ತಲುಪಿದ್ದೇವೆ. ಇಂದು 41 ಸಾವಿರ ಕೋಟಿ ರೂ.ವೆಚ್ಚದ ಬೃಹತ್ ರೈಲ್ವೆ ಯೋಜನೆಗಳನ್ನು ದೇಶಕ್ಕೆ ನೀಡಿದ್ದಾರೆ. ಪ್ರಧಾನಿಗಳ ದೂರದೃಷ್ಟಿಯಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

  ಸಮೀಪದ ಗುಳೇದಗುಡ್ಡ ರೈಲ್ವೆ ಸ್ಟೇಷನ್‌ನಲ್ಲಿ ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ಸೇತುವೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

  ಸ್ವಚ್ಛ ಭಾರತ ಪರಿಕಲ್ಪನೆ ಹೊಂದಿರುವ ರೈಲ್ವೆಗಳ ಸ್ವಚ್ಛತೆ, ರೈಲ್ವೆ ನಿಲ್ದಾಣಗಳು ಮೂಲ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಹೊಂದಿವೆ. ಪ್ರಧಾನಮಂತ್ರಿ ಮಾರ್ಗದರ್ಶನದಲ್ಲಿ ಭಾರತೀಯ ರೈಲ್ವೆ ತನ್ನ ಪುನರುಜ್ಜೀವನದ ಸುವರ್ಣ ಹಂತದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

  ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಹತ್ತು ವರ್ಷಗಳಲ್ಲಿ ಪ್ರಧಾನಿಯವರ ಅವಿರತ ಪರಿಶ್ರಮದ ಪ್ರಯತ್ನಗಳು ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿಶೇಷ ಒತ್ತು ನೀಡಿದ್ದರಿಂದ ಇಂದು ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರೈಲು ವ್ಯವಸ್ಥೆ ಹೊಂದಿದೆ ಎಂದರು.

  ಶಾಲೆ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
  ಕೆಲವಡಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಸಂಗೊಂದಿ ಅಧ್ಯಕ್ಷತೆ ವಹಿಸಿದ್ದರು.

  ಕೆಲವಡಿ ಗ್ರಾಪಂ ಉಪಾಧ್ಯಕ್ಷೆ ಸುಮಂಗಲಾ ಮಾದರ, ಮನ್ನಿಸ್ ಅಗರವಾಲ್, ಉಮಾಶಂಕರ, ಆಸಂಗೆಪ್ಪ ನಕ್ಕರಗುಂದಿ, ಕಮಲಕಿಶೋರ ಮಾಲಪಾಣಿ, ಮದುಸೂಧನ ರಾಂದಡಾ, ಕನಕಪ್ಪ ಬಂದಕೇರಿ, ಚಂದ್ರಶೇಖರ ಕಾಳನ್ನವರ, ಕೆಲವಡಿ ಗ್ರಾಪಂ ಸದಸ್ಯರು, ರೈಲ್ವೆ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts