ಕಾರವಾರ:ಬ್ರೇಕ್ ವೈಫಲ್ಯವಾಗಿ ಘಟ್ಟದ ದಾರಿಯಲ್ಲಿ ಅರ್ಧಕ್ಕೇ ನಿಂತಿದ್ದ ಮಿನಿ ಬಸ್‌ನಲ್ಲಿದ್ದ ಪ್ರವಾಸಿಗರಿಗೆ ಜಿಲ್ಲಾ ಪೊಲೀಸರು ಸಹಕಾರ ಮಾಡಿದ್ದಾರೆ.
ಶಿರಸಿಯಿಂದ ಯಾಣಕ್ಕೆ ಬರುವ ಗುಡ್ಡದ ರಸ್ತೆಯಲ್ಲಿ ಬಸ್ ಭಾನುವಾರ ರಾತ್ರಿ ಹಾಳಾಗಿತ್ತು. ಮೊಬೈಲ್ ನೆನ್ವರ್ಕ್ ಕೂಡ ಇಲ್ಲದ ಪ್ರದೇಶವಾಗಿದ್ದರಿಂದ ಪ್ರವಾಸಿಗರು ಭಯಭೀತರಾಗಿದ್ದರು. ಬಸ್‌ನಲ್ಲಿ 8 ಜನ ಹುಡುಗಿಯರು ಹಾಗೂ 16 ಹುಡುಗರು ಸೇರಿ ಒಟ್ಟು 24 ಜನ ಪ್ರವಾಸಿಗರು ಸಿಲುಕಿ ಆತಂಕಕ್ಕೊಳಗಾಗಿದ್ದರು.
ಅವರು 112 ಗೆ ವೈಸ್ ಮೆಸೇಜ್ ಒಂದನ್ನು ಕಳಿಸಿ ತಮಗೆ ಸಹಕಾರ ನೀಡುವಂತೆ ಕೋರಿದ್ದರು. ಗೋಕರ್ಣದ 112 ವಾಹನವನ್ನು ಕೊಂಡೊಯ್ದು ರಾತ್ರಿ ಪ್ರವಾಸಿಗರ ಸಂಕಷ್ಟ ಕೇಳಿದ ಪೊಲೀಸರು ಅಚವೆ ಉಪ ಠಾಣೆ ಹಾಗೂ ಸ್ಥಳೀಯರ ಸಹಕಾರ ಪಡೆದು ಜೆಸಿಬಿ ತಂದು ಬಸ್‌ನ್ನು ಹಿಲ್ಲೂರಿಗೆ ತಂದರು. ನಂತರ. ಬೇರೆ ಬಸ್ ವ್ಯವಸ್ಥೆ ಮಾಡಿಸಿಕೊಟ್ಟು ಪೊಲೀಸರು ಸಹಕಾರ ಮಾಡಿ ಪ್ರವಾಸಿಗರನ್ನು ವಾಪಸ್ ಕಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟ್ಟದ ತಪ್ಪಲಲ್ಲಿ ರಾತ್ರಿ ಕೆಟ್ಟು ನಿಂತ ಪ್ರವಾಸಿಗರ ಬಸ್: ಮುಂದೇನಾಯ್ತು ಓದಿ

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…
ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…
ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes
grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…