ನಿರಾಸೆ ಮೂಡಿಸಿದ ಸಚಿವ ಸಾ.ರಾ.ಮಹೇಶ

ಅಮೀನಗಡ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ ಪ್ರವಾಸಿ ತಾಣ ಐಹೊಳೆಗೆ ಪ್ರವಾಸಿಗರಂತೆ ಭೇಟಿ ನೀಡಿ ಹೋಗಿದ್ದಕ್ಕೆ ಸ್ಥಳೀಯ ನಾಗರಿಕರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಹೊಳೆ ಗ್ರಾಮಕ್ಕೆ ಶುಕ್ರವಾರ ಪ್ರವಾಸೋದ್ಯಮ ಸಚಿವರ ಭೇಟಿ ನೀಗದಿಯಾಗಿತ್ತು. ಪ್ರವಾಸಿ ತಾಣಕ್ಕೆ ಪ್ರವಾಸೋದ್ಯಮ ಸಚಿವರು ಬರುತ್ತಾರೆಂಬ ಕಾರಣಕ್ಕೆ ಗ್ರಾಮ ಸ್ಥಳಾಂತರ ಸಮಸ್ಯೆ ಇತ್ಯರ್ಥ ಪಡಿಸಬಹುದೆಂಬ ಭರವಸೆ ಸ್ಥಳೀಯರಲ್ಲಿ ಮೂಡಿತ್ತು. ಸಂಜೆವರೆಗೂ ಕಾಯ್ದರೂ ಸಚಿವರು ಬಾರದ್ದರಿಂದ ನಿರಾಶೆಗೊಳಗಾದರು.

ಶನಿವಾರ ಸಚಿವರು ಆಗಮಿಸಿದರಾದರೂ ದೇವಾಲಯ, ಮ್ಯೂಜಿಯಂ ವೀಕ್ಷಿಸಿ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದರು. ಸಚಿವ ಆಗಮಿಸುತ್ತಿರುವುದರಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕೆಂಬ ಬಯಕೆ ಜನರಲ್ಲಿತ್ತು. ಆದರೆ ಸಚಿವರು ಪ್ರವಾಸಿಗರಂತೆ ಬಂದು ಹೋಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.